ಮಂಜೇಶ್ವರದಲ್ಲಿ ಬೇಕರಿ ಬೆಂಕಿಗಾಹುತಿ

0
28
Exif_JPEG_420

ಮಂಜೇಶ್ವರ: ಇಲ್ಲಿನ ರೈಲು ನಿಲ್ದಾಣ ಬಳಿ ಕಾರ್ಯಾಚರಿಸುವ ಉದ್ಯಾವರ ನಿವಾಸಿ ಅಬ್ದುಲ್ ಹಮೀದ್‌ರ ನ್ಯೂ ಅಲ್ಲ ಸ್ವೀಟ್ಸ್ ಆಂಡ್ ಜ್ಯೂಸ್ ಸೆಂಟರ್ ನಿನ್ನೆ ರಾತ್ರಿ ಬೆಂಕಿಗಾಹುತಿಯಾಗಿದೆ. ಇಂದು ಮುಂಜಾನೆ ಈ ದಾರಿಯಾಗಿ ತೆರಳಿದ ಯುವಕನೋರ್ವ ಇದನ್ನು ಗಮನಿಸಿದ್ದು, ಬಳಿಕ ಅಂಗಡಿ ಮಾಲಕನಿಗೆ ತಿಳಿಸಲಾಗಿದೆ. ಈ ವೇಳೆ ಅಂಗಡಿ ಸಂಪೂರ್ಣ ಉರಿದಿದೆ. ಬಳಿಕ ಅಗ್ನಿಶಾಮಕದಳ ತಲುಪಿ ಬೆಂಕಿ ಹರಡುವುದನ್ನು ತಪ್ಪಿಸಿದೆ.  ಅಗ್ನಿಶಾಮಕದಳ ಅಸಿಸ್ಟೆಂಟ್ ಸ್ಟೇಶನ್ ಆಫೀಸರ್ ಎ.ಟಿ. ಜೋರ್ಜ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಅಂಗಡಿಯಲ್ಲಿದ್ದ ಎರಡು ಫ್ರಿಡ್ಜ್, ವಿವಿಧ ಸಾಮಗ್ರಿಗಳು, ತಿಂಡಿ-ತಿನಿಸುಗಳೆಲ್ಲ ಉರಿದು ಭಸ್ಮವಾಗಿದೆ. ಶಾರ್ಟ್ ಸರ್ಕ್ಯೂಟ್ ಕಾರಣವೆಂದು ಶಂಕಿಸಲಾಗಿದೆ.

NO COMMENTS

LEAVE A REPLY