ನಿಲ್ಲಿಸಿದ್ದ ಎರಡು ಬಸ್, ಒಂದು ಲಾರಿಯ ಬ್ಯಾಟರಿ ಕಳವು

0
36

ಪೆರ್ಲ: ರಾತ್ರಿ ವೇಳೆ ನಿಲ್ಲಿಸಿದ್ದ ಎರಡು ಬಸ್ ಹಾಗೂ ಒಂದು ಲಾರಿಯಿಂದ ಬ್ಯಾಟರಿ ಕಳವಿಗೀಡಾದ ಘಟನೆ ನಡೆದಿದೆ.

ಪೆರ್ಲ ಕೈಕಂಬ ಎಂಬಲ್ಲಿ ನಿನ್ನೆ ರಾತ್ರಿ ನಿಲ್ಲಿಸಿದ್ದ ಪೆರ್ಲ-ಕುಂಬಳೆ ರೂಟ್‌ನಲ್ಲಿ ಸಂಚರಿಸುವ ಎರಡು ಮಹಾಲಕ್ಷ್ಮಿ ಬಸ್‌ಗಳ ಒಟ್ಟು ನಾಲ್ಕು ಬ್ಯಾಟರಿಗಳನ್ನು ಕಳವು ನಡೆಸಲಾಗಿದೆ. ಅದೇ ರೀತಿ ಪೆರ್ಲ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದ ಟಿಪ್ಪರ್ ಲಾರಿಯೊಂದರ ಒಂದು ಬ್ಯಾಟರಿ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಬಸ್‌ಗಳ ಬ್ಯಾಟರಿ ಕಳವಿಗೀಡಾದ ಬಗ್ಗೆ ಮೆನೇಜರ್ ಗಣೇಶ್ ರೈ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ.  ಒಂದು ಬ್ಯಾಟರಿಗೆ ಸುಮಾರು ೧೨ ಸಾವಿರ ಕ್ಕಿಂತಲೂ ಹೆಚ್ಚು ಬೆಲೆಯಿದೆ. ಇದರಿಂದ ಸುಮಾರು ೪೮ ಸಾವಿರಕ್ಕಿಂತ ಹೆಚ್ಚು ನಷ್ಟವುಂಟಾ ಗಿದೆಯೆಂದು ದೂರಲಾಗಿದೆ.

NO COMMENTS

LEAVE A REPLY