ವಾಮಂಜೂರು ಚೆಕ್‌ಪೋಸ್ಟ್‌ನಲ್ಲಿ ಆಹಾರ ಸಾಮಗ್ರಿ ತಪಾಸಣೆ

0
36
Exif_JPEG_420

ಉಪ್ಪಳ: ಓಣಂ ಹಬ್ಬದ ಆಚರಣೆಯಂಗವಾಗಿ ವಾಮಂಜೂರು ಚೆಕ್ ಪೋಸ್ಟ್‌ನಲ್ಲಿ ಫುಡ್ ಟೆಸ್ಟಿಂಗ್ ಲ್ಯಾಬ್ ಕಾರ್ಯಾಚರಣೆ ಆರಂಭಿಸಿದೆ. ಈ ಚೆಕ್ ಪೋಸ್ಟ್ ಮೂಲಕ ಸಾಗುವ ವಾಹನಗಳನ್ನು ತಡೆದು ನಿಲ್ಲಿಸಿ ಅದರಲ್ಲಿನ ಆಹಾರ ಸಾಮಗ್ರಿಗಳನ್ನು ಸ್ಥಳದಲ್ಲೇ ಪರಿಶೀಲಿಸಲಾಗುವುದು. ಇದಕ್ಕಾಗಿ ಸಂಚಾರಿ ಲ್ಯಾಬ್ ಇಲ್ಲಿ ಏರ್ಪಡಿಸಲಾಗಿದೆ. ನಿನ್ನೆ ಸಂಜೆಯಿಂದ ಆರಂಭಗೊಂಡ ತಪಾಸಣೆ ನಾಳೆವರೆಗೆ ಮುಂದುವರಿಯಲಿದೆಯೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಮೀನು, ತರಕಾರಿ, ಹಾಲು ಸಹಿತ ಎಲ್ಲಾ ಆಹಾರ ಸಾಮಗ್ರಿಗಳನ್ನು ತಪಾಸಣೆಗೊಳಪಡಿಸಲಾಗುತ್ತಿದೆ. ಫುಡ್ ಸೇಫ್ಟಿ ಆಫೀಸರ್‌ಗಳಾದ ಮುಸ್ತಫ, ಅನ್ಸ, ಮುರ್ಸೀದ್, ನೌಶಾದ್ ತಂಡದಲ್ಲಿದ್ದಾರೆ.

NO COMMENTS

LEAVE A REPLY