ಆರ್.ಎಸ್.ಎಸ್. ಬೌದ್ಧಿಕ್ ಪ್ರಮುಖ್ ಕೆರೆಯಲ್ಲಿ ಮುಳುಗಿ ದುರ್ಮರಣ: ನಾಡಿನಲ್ಲಿ ಶೋಕಸಾಗರ ಸೃಷ್ಟಿ

0
43

ಮುಳ್ಳೇರಿಯ: ಆರ್.ಎಸ್.ಎಸ್. ಕಾರಡ್ಕ ಮಂಡಲ ಬೌದ್ಧಿಕ್ ಪ್ರಮುಖ್ ಕೆರೆಯಲ್ಲಿ ಮುಳುಗಿ ದುರ್ಮರಣಕ್ಕೀಡಾದ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ. ಮುಳ್ಳೇರಿಯದಲ್ಲಿ ಕಾಡುತ್ಪತ್ತಿ ವ್ಯಾಪಾರಿಯೂ-ಬಿಜೆಪಿ ಪಂಚಾಯತ್ ಸಮಿತಿ ಉಪಾಧ್ಯಕ್ಷರಾದ ಅಡ್ಕ ಚೋದಮೂಲೆಯ ಚಂದ್ರಶೇಖರರ ಪುತ್ರ ಶ್ರೀಜನ್ ಕುಮಾರ್ ಯಾನೆ ಶ್ರೀಕುಟ್ಟನ್(೨೩) ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಶ್ರೀಜನ್ ಕುಮಾರ್ ದುರ್ಮರಣ ಕ್ಕೀಡಾದ ಘಟನೆ ನಿನ್ನೆ ಮಧ್ಯಾಹ್ನ ವೇಳೆ ಸಂಭವಿಸಿದೆ. ಮನೆಯಿಂದ ೧೦೦ ಮೀಟರ್ ದೂರದಲ್ಲಿರುವ ತೋಟದಲ್ಲಿ ಮೀನು ಸಾಕಣೆಗಾಗಿ ನಿರ್ಮಿಸಿದ ಕೆರೆಯಲ್ಲಿ ಸ್ನಾನಕ್ಕೆಂದು ಶ್ರೀಜನ್ ಕುಮಾರ್ ನಿನ್ನೆ ಮಧ್ಯಾಹ್ನ  ತೆರಳಿದ್ದರು. ದೀರ್ಘ ಹೊತ್ತಾದರೂ ಅವರು ಮರಳಿ ಬಾರದ ಹಿನ್ನೆಲೆಯಲ್ಲಿ ತಾಯಿ ಹುಡುಕಾಟಕ್ಕೆ ತೊಡಗಿದಾಗ ಕೆರೆಯ ಬದಿಯಲ್ಲಿ ಚಪ್ಪಲಿಗಳು ಕಂಡು ಬಂದಿದೆ. ಇದರಿಂದ ಪುತ್ರ ಅಪಾಯಕ್ಕೀಡಾದ ಬಗ್ಗೆ ಸಂಶಯಗೊಂಡು ತಾಯಿ ಬೊಬ್ಬೆ ಹಾಕಿದ್ದು, ಅಷ್ಟರಲ್ಲಿ ನಾಗರಿಕರು ಓಡಿ ಅಲ್ಲಿಗೆ ತಲುಪಿದ್ದಾರೆ. ಬಳಿಕ ಕೆರೆಯ ಒಂದು ಭಾಗ ತೆರೆದು ಅರ್ಧದಷ್ಟು ನೀರನ್ನು ಹೊರಕ್ಕೆ ಬಿಡಲಾಯಿತು. ಅಷ್ಟರಲ್ಲಿ ತಲುಪಿದ ಅಗ್ನಿಶಾಮಕದಳದ ಸಹಾಯದೊಂದಿಗೆ ಶ್ರೀಜನ್ ಕುಮಾರ್‌ರನ್ನು ಕೆರೆಯಿಂದ ಮೇಲಕ್ಕೆತ್ತಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ತಂದೆ, ತಾಯಿ ರಾಧಾ(ಕಾರಡ್ಕ ಪಂಚಾಯತ್ ಮಾಜಿ ಸದಸ್ಯೆ), ಸಹೋದರ ಜಿತಿನ್ ಚಂದ್ರನ್(ದುಬಾ), ಸಹೋದರಿ ಶ್ರುತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY