ಪಾಕ್ ಜೈಲಲ್ಲ್ಲಿದ್ದ ಉಗ್ರ ಮಸೂದ್ ಗುಪ್ತ ಬಿಡುಗಡೆ

0
35

ಹೊಸದಿಲ್ಲಿ: ಭಾರತದಲ್ಲಿ ಭಯೋತ್ಪಾ ದಕರನ್ನು ಬಳಸಿ ಹಲವೆಡೆಗಳಲ್ಲಾಗಿ ದಾಳಿ ನಡೆಸಲು ಪಾಕಿಸ್ತಾನ ಭಾರೀ ಸಂಚಿಗೆ ರೂಪು ನೀಡಿದೆ ಎಂದು ಕೇಂದ್ರ ಗುಪ್ತಚರ ವಿಭಾಗ ಮುನ್ನೆಚ್ಚರಿಕೆ ನೀಡಿದೆ. ಅದರಂತೆ ರಾಜಸ್ತಾನ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಗಡಿಯಾದ್ಯಂತ  ಕಟ್ಟೆಚ್ಚರಕ್ಕೆ ಕೇಂದ್ರ ಸರಕಾರ ಗಡಿ ಭದ್ರತಾ ಪಡೆಗೆ ತುರ್ತು ನಿರ್ದೇಶ ನೀಡಿದೆ. ಭಾರತದಲ್ಲಿ ದಾಳಿ ನಡೆಸಲು ಇಸ್ಲಾಮಾಬಾದ್‌ನಲ್ಲಿ ಭಾರೀ ಸಂಚಿಗೆ ಪಾಕಿಸ್ತಾನ ರೂಪು ನೀಡುತ್ತಿದ್ದು ಇದಕ್ಕಾಗಿ ಜಾಗತಿಕ ಉಗ್ರ ಹಣೆಪಟ್ಟಿಯ ಜೈಷೆ-ಎ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನನ್ನು ಪಾಕಿಸ್ತಾನ ಜೈಲಿನಿಂದ ಅತೀವ ಗುಪ್ತವಾಗಿ ಬಿಡುಗಡೆ ಮಾಡಿ ದೆ ಎಂದೂ ಗುಪ್ತಚರ ಇಲಾಖೆ ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಿದೆ.

ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ೩೭೦ನೇ ವಿಧಿ ರದ್ದುಗೊಳಿಸಿದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತದ ವಿರುದ್ಧ ಅಂದಿನಿಂದಲೂ ಭಾರೀ ಸಂಚಿಗೆ ರೂಪು ನೀಡುತ್ತಾ ಬಂದಿದೆ. ಅದರ ಭಾಗವಾಗಿಯೇ ರಾಜಸ್ತಾನ ಹಾಗೂ ಜಮ್ಮುಕಾಶ್ಮೀರ ಬಳಿ ಭಾರತದ ಗಡಿಯಲ್ಲಿ ಈಗಾಗಲೇ ಹೆಚ್ಚುವರಿ ಸೈನಿಕರನ್ನು ಪಾಕ್  ನಿಯೋಜಿಸಿದೆ ಎಂದು ಗುಪ್ತಚರ ವಿಭಾಗ ಎಚ್ಚರಿಕೆ ಮಾಹಿತಿ ನೀಡಿದೆ.

ಉಗ್ರರನ್ನು ಮುಖವಾಡವ ನ್ನಾಗಿಸಿ ಪಾಕಿಸ್ತಾನ ಭಾರತದ ಮೇಲೆ ಯಾವಾಗಲಾದರೂ ದಾಳಿ ನಡೆಸಬಹುದು. ಎಲ್ಲದಕ್ಕೂ ಸಿದ್ಧರಾಗಿ ಎನ್ನುವಂತೆ ಗುಪ್ತಚರ ವಿಭಾಗ ಜಮ್ಮು ಹಾಗೂ ರಾಜಸ್ತಾನ ಗಡಿ ಭದ್ರತಾ ಪಡೆಗೆ ತಿಳಿಸಿದೆ. ಭಯೋತ್ಪಾದನಾ ದಾಳಿ ನಡೆಸುವುದಕ್ಕಾಗಿಯೇ ಪಾಕಿಸ್ತಾನ ಸದ್ದಿಲ್ಲದೆ ಮಸೂದ್ ಅಜರ್‌ನನ್ನು ಬಿಡುಗಡೆಗೊಳಿಸಿದೆ. ಮಾತ್ರವಲ್ಲ ಪಾಕಿಸ್ತಾನದ ಎಲ್ಲಾ ಉಗ್ರಗಾಮಿ ಸಂಘಟನೆಗಳನ್ನು ಒಗ್ಗೂಡಿಸಿ ಭಾರತದ ಮೇಲೆ ಭಾರೀ ಮಟ್ಟದ ದಾಳಿ ನಡೆಸುವಂತೆ ಪಾಕಿ ಸ್ತಾನ ಮಸೂದ್ ಅಜರ್‌ಗೆ ನಿರ್ದೇಶ ಹಾಗೂ  ಅಂತಹ ದಾಳಿಯ ನೇತೃತ್ವ ವನ್ನು ಪಾಕಿಸ್ತಾನ ಆತನಿಗೆ ನೀಡಿದೆ.

ಜಮ್ಮುಕಾಶ್ಮೀರದ ಪುಲ್ವಾಮದಲ್ಲಿ ಫೆಬ್ರವರಿ ೧೪ರಂದು ನಡೆದ ಬಾಂಬ್ ದಾಳಿಯ ಸಂಚುಕೋರ ಮಸೂದ್ ಅಜರ್ ಆಗಿದ್ದನು. ಅದರಿಂದಾಗಿ ಆತನ ವಿರುದ್ಧ ಭಾರತ ಕಠಿಣ ಕ್ರಮ ಜರಗಿಸಬಹುದೆಂಬ ಹೆದರಿಕೆಯಿಂ ದಾಗಿ ಪಾಕಿಸ್ತಾನ ಅಜರ್‌ನನ್ನು ರಕ್ಷಣಾ ಬಂಧನದಲ್ಲಿರಿಸಿತ್ತು. ಈಗ ಆತನ ನೇತೃತ್ವದಲ್ಲೇ ಭಾರತದ ವಿರುದ್ಧ ಮತ್ತು ದಾಳಿ ನಡೆಸುವ ಉದ್ದೇಶದಿಂದಲೇ ಪಾಕಿಸ್ತಾನ ಆತನನ್ನು ಜೈಲಿನಿಂದ ಬಿಡುಗಡೆಗೊಳಿ ಸಿ ರುವುದರ ಪ್ರಧಾನ ಹಿನ್ನೆಲೆಯಾಗಿ ದೆ ಎಂದು ಗುಪ್ತಚರ ವಿಭಾಗ ತಿಳಿಸಿದೆ.

ಜಮ್ಮುಕಾಶ್ಮೀರದ ವಿಚಾರದಲ್ಲಿ ಭಾರತದ ನಡೆಗೆ ತಕ್ಕ ಪ್ರತಿಕ್ರಿಯೆ ನೀಡಲಾಗುವುದೆಂದು ಶುಕ್ರವಾರ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬೆದರಿಕೆ ಸಂದೇಶ ರವಾನಿ ಸಿದ್ದರು. ಜೊತೆಗೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಕೂಡಾ ಕಾಶ್ಮೀರಕ್ಕಾಗಿ ನಾವು ಯಾವ ಹಂತಕ್ಕೂ ಹೋಗುತ್ತೇವೆಂದು ತಿಳಿಸಿದ್ದಾರೆ.

NO COMMENTS

LEAVE A REPLY