ತ್ರಿವಳಿ ತಲಾಖ್ ಕಾನೂನು: ಕಾಸರಗೋಡಿನಲ್ಲಿ ಪ್ರಥಮ ಕೇಸು ದಾಖಲು

0
44

ಕಾಸರಗೋಡು: ತ್ರಿವಳಿ ತಲಾಖ್ ನಿಷೇಧ ಕಾನೂನು ಜ್ಯಾರಿ ಗೊಂಡ ಬಳಿಕ ಆ ಕಾನೂನಿನಂತೆ ಕಾಸರಗೋಡು ಪೊಲೀಸ್ ಠಾಣೆಯಲ್ಲಿ ಮೊದಲ ಕೇಸು ದಾಖಲುಗೊಂಡಿದೆ. ಶಿರಿಬಾಗಿಲು ಸಮೀಪದ ಪುಳ್ಕೂರಿನ ಮೈಮುನಾ (೨೯) ಎಂಬಾಕೆ ಪೊಲೀಸರಿಗೆ ದೂರು ನೀಡಿದ್ದು  ಅದರಂತೆ ಆಕೆಯ ಪತಿ ಕೂಡ್ಲು ಬಳ್ಳೂರು ಹೌಸ್‌ನ ಅಶ್ರಫ್‌ನ ವಿರುದ್ಧ ಪೊಲೀಸರು ತ್ರಿವಳಿ ತಲಾಖ್ ನಿಷೇಧ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೈಮುನಾ ಮತ್ತು ಅಶ್ರಫ್‌ರ ವಿವಾಹ ೨೦೦೭ ಜುಲೈ ೧೫ರಂದು ನಡೆದಿತ್ತು. ೨೦೧೯ ಮಾರ್ಚ್ ೧೫ರಂದು ಆತ ಮೈಮುನಾ ಸಹೋದರನ ಫೋನ್‌ಗೆ ವಾಟ್ಸ್‌ಪ್ ಸಂದೇಶ ಮೂಲಕ  ತಲಾಖ್ ನೀಡಿದ್ದನೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪೊಲೀ ರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

NO COMMENTS

LEAVE A REPLY