ರೈಲು ಹಳಿಯಲ್ಲಿ ಬಿರುಕು: ಬುಡಮೇಲು ಕೃತ್ಯ ಶಂಕೆ

0
33

ತಿರುವನಂತಪುರ: ತಿರುವನಂ ತಪುರ ಬಳಿ ಇಂದು ಬೆಳಿಗ್ಗೆ ರೈಲು ಹಳಿಯಲ್ಲಿ ಬಿರುಕು ಪತ್ತೆಯಾಗಿದ್ದು,   ಬುಡಮೇಲು ಕೃತ್ಯವಾಗಿರಬಹುದೆಂಬ ಶಂಕೆಯೂ ಪೊಲೀಸರಿಗೆ ಉಂಟಾಗಿದೆ.

ತಿರುವನಂತಪುರಕ್ಕೆ ಸಮೀಪದ ಕಳಕ್ಕೂಟ-ಕೊಚ್ಚುವೇಳಿ ನಡುವಿನ ರೈಲು ಹಳಿಯಲ್ಲಿ ಇಂದು ಬೆಳಿಗ್ಗೆ   ಹಳಿ ಬಿರುಕು ಬಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ರಾಜ್ಯದಲ್ಲಿ ಉಗ್ರಗಾಮಿಗಳ ದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತವಾಗಿ ಹೈ ಅಲರ್ಟ್  ಘೋಷಿಸಿರುವ ವೇಳೆಯಲ್ಲೇ  ದಿಢೀರ್ ಬಿರುಕು ಪತ್ತೆಯಾಗಿರು ವುದು ಭಾರೀ  ನಿಗೂಢತೆಗಳಿಗೂ ದಾರಿ ಮಾಡಿಕೊಟ್ಟಿದೆ. ಮಾತ್ರವಲ್ಲ ಇದು  ಬುಡಮೇಲು ಕೃತ್ಯವಾಗಿರ ಬಹುದೇ ಎಂಬ ಶಂಕೆಯೂ ಉಂಟಾಗಿದೆ.  ಸುದ್ಧಿ ತಿಳಿದ ರೈಲ್ವೇ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸಮಗ್ರ ತನಿಖೆ ಆರಂಭಿಸಿದ್ದಾರೆ. ರೈಲು ಹಳಿಯಲ್ಲಿ ಬಿರುಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಂಟರ್ ಸಿಟಿ, ಜಯಂತಿ ಜನತಾ ಮಾವೇಲಿ ಎಕ್ಸ್‌ಪ್ರೆಸ್ ಇತ್ಯಾದಿ  ದೂರದ ರೈಲುಗಳನ್ನು ಇತರ ನಿಲ್ದಾಣಗಳಲ್ಲಿ ತಡೆದು ನಿಲ್ಲಿಸಲಾಗಿದೆ.  ರಾಜ್ಯದಲ್ಲಿ ರೈಲು ಸೇವೆ ಅಸ್ತವ್ಯಸ್ತಗೊಳಿಸುವಂತೆ ಮಾಡಿದೆ.

NO COMMENTS

LEAVE A REPLY