ಆಟೋರಿಕ್ಷಾ ಮಗುಚಿ ಚಾಲಕ ಮೃತ್ಯು

0
41

ಕಾಸರಗೋಡು: ಆಟೋರಿಕ್ಷಾ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಚಾಲಕ ಸಾವನ್ನಪ್ಪಿದ ಘಟನೆ ನಡೆದಿದೆ. ಹೊಸದುರ್ಗ ಮಡಿಕೈ ಕಾರಾಕೋಡ್‌ನ ಕೆ.ಬಿನು(೪೨) ಸಾವನ್ನಪ್ಪಿದ ರಿಕ್ಷಾ ಚಾಲಕ.

ಹೊಸದುರ್ಗದಲ್ಲಿ ಇವರು ರಿಕ್ಷಾ ಸೇವೆ ನಡೆಸುತ್ತಿದ್ದರು. ನಿನ್ನೆ ಸಂಜೆ ಕೆಲಸ ಮುಗಿಸಿ ರಿಕ್ಷಾದಲ್ಲಿ ಮನೆಗೆ ಹೋಗುತ್ತಿದ್ದ ದಾರಿ ಮಧ್ಯೆ ಕಾರೋಟ್ ಸೇತುವೆ ಬಳಿ ರಿಕ್ಷಾ ನಿಯಂತ್ರಣ ತಪ್ಪಿ ಸೇತುವೆಗೆ ಬಡಿದು ಬಿನು ಸೇತುವೆಯಿಂದ ಕೆಳಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

ಕೋರನ್ ಪಣಿಕ್ಕರ್-ಚೆರಿಯಮ್ಮ ದಂಪತಿ ಪುತ್ರನಾಗಿರುವ ಮೃತ ಬಿನು ಪತ್ನಿ ಪದ್ಮಿನಿ(ಕುಂಬಳೆ), ಮಕ್ಕಳಾದ ದಿವ್ಯಾಶ್ರೀ, ಕಾವ್ಯಾಶ್ರೀ, ಸಹೋದರ-ಸಹೋದರಿಯರಾದ ಭರತನ್, ವೇಣು, ಕೃಷ್ಣನ್, ಮಧು, ಓಮನ, ಲೀಲ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY