ಪಯಸ್ವಿನಿ ಹೊಳೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

0
50

ಮುಳ್ಳೇರಿಯ: ಪಯಸ್ವಿನಿ ಹೊಳೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ನಿನ್ನೆ ಅಪರಾಹ್ನ ಪಂಜಿಕಲ್ಲು   ಬಳಿ ಕಾಣಿಸಿಕೊಂಡ ಮೃತದೇಹ ನೀರಿನಲ್ಲಿ ತೇಲುತ್ತಾ ಸಾಗಿದ್ದು, ಇಂದು ಬೆಳಿಗ್ಗೆ ಬೇಡಗಂ ಠಾಣೆ ವ್ಯಾಪ್ತಿಯ ಒಳಿಯತ್ತಡ್ಕ ಎಂಬಲ್ಲಿನ ಹೊಳೆ ಬದಿ ಪತ್ತೆಯಾಗಿದೆ. ಸುಮಾರು ೪೦ರಿಂದ ೪೫ ವರ್ಷ ಪ್ರಾಯ ಅಂದಾಜಿಸುವ ಗಂಡಸಿನ ಮೃತದೇಹ ಇದಾಗಿದೆ. ಮೃತದೇಹದಲ್ಲಿ ನೀಲಿ ಬಣ್ಣದ ಒಳ ಉಡುಪು ಮಾತ್ರವೇ ಇದೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ.  ನಿನ್ನೆ ಅಪರಾಹ್ನ ೨ ಗಂಟೆಗೆ ಪಂಜಿಕಲ್ಲು ತೂಗು ಸೇತುವೆ ಬಳಿ ಮೃತದೇಹ ಹೊಳೆಯಲ್ಲಿ ಕಂಡುಬಂದಿತ್ತು. ಈ ಬಗ್ಗೆ ನಾಗರಿಕರು ನೀಡಿದ ಮಾಹಿ ತಿಯಂತೆ ಆದೂರು ಪೊಲೀಸರು ಹಾಗೂ ಕಾಸರಗೋಡಿನಿಂದ ಅಗ್ನಿಶಾಮಕದಳ ಸ್ಥಳಕ್ಕೆ ತಲುಪಿತ್ತು.  ಹೊಳೆಯಲ್ಲಿ ಶೋಧ ನಡೆಸಿದರೂ ಮೃತದೇಹ ಪತ್ತೆಯಾಗಿರಲಿಲ್ಲ. ಮುಕ್ಕಾಲು ಗಂಟೆ ಬಳಿಕ ಮೃತದೇಹ ಆದರು ಬಳಿ ಕಾಣಿಸಿಕೊಂಡಿತ್ತೆನ್ನಲಾಗಿದೆ. ಧಾರಾಕಾರ ನೀರು ಹರಿಯುತ್ತಿದ್ದ ಹೊಳೆಯಲ್ಲಿ ಮೃತದೇಹ ರಭಸದಿಂದ ಸಾಗಿತ್ತು. ಮೃತದೇಹಕ್ಕಾಗಿ ಶೋಧ ನಡೆಸುತ್ತಿದ್ದಂತೆ ಇಂದು ಬೆಳಿಗ್ಗೆ ಎರಿಂ ಞಿಪುಳ ಬಳಿಯ ಒಳಯತ್ತಡ್ಕ ಹೊಳೆ ಬದಿ ಮೃತದೇಹ ಕಂಡುಬಂದಿದೆ.

ಮೃತ ವ್ಯಕ್ತಿಯ ಗುರುತು ಪತ್ತೆಹಚ್ಚಲಾಗಲಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆಯೆಂದು ಪೊಲೀ ಸರು ತಿಳಿಸಿದ್ದಾರೆ. 

NO COMMENTS

LEAVE A REPLY