ಉಗ್ರರ ದಾಳಿ ಸಾಧ್ಯತೆ: ರಾಜ್ಯದಲ್ಲಿ ಹೈ ಅಲರ್ಟ್ ; ಎಂಟು ಲಷ್ಕರ್ ಉಗ್ರರ ಸೆರೆ

0
44

ತಿರುವನಂತಪುರ: ದಕ್ಷಿಣ ಭಾರತದಲ್ಲಿ ಅದರಲ್ಲೂ ಕೇರಳದಲ್ಲಿ ಭಯೋತ್ಪಾದಕ ದಾಳಿ ನಡೆಯುವ  ಸಾಧ್ಯತೆ ಇದೆ ಎಂಬ ಸೂಚನೆಯನ್ನು  ಭಾರತೀಯ ಸೇನೆ ನೀಡಿರುವ ಹಿನ್ನಲೆಯಲ್ಲಿ ಕೇರಳ ಸಹಿತ ದಕ್ಷಿಣದ ರಾಜ್ಯಗಳಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.

ಸಾರ್ವಜನಿಕರು ಓಡಾಡುವ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ಇರಿಸುವಂತೆ ಎಲ್ಲಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಲೋಕನಾಥ್ ಬೆಹ್ರಾ ಸೂಚನೆ ನೀಡಿದ್ದಾರೆ. ಯಾವುದೇ ಶಂಕಾಸ್ಪದ ಬೆಳವಣಿಗೆ ಕಂಡು ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಅವರು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.

ಕೇರಳ ಓಣಂ ಹಬ್ಬ ಆಚರಣೆ ವೇಳೆಯಲ್ಲೇ ಉಗ್ರರು ಅದನ್ನು  ತಮ್ಮ ದುಷ್ಕೃತ್ಯಗಳಿಗೆ ಬಳಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಜನ ಸೇರುವ ಕಡೆಗಳಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಏರ್ಪಡಿಸಲಾಗಿದೆ. ಬಸ್ಸು, ರೈಲು ಹಾಗೂ ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.

ಭಾರತೀಯ ಸೇನೆಯ ದಕ್ಷಿಣ ಕಮಾಂಡರ್ ಎಂದರೆ ದಕ್ಷಿಣ ಭಾರತ ಮಾತ್ರವಲ್ಲ ದಕ್ಷಿಣದ ಪರ್ಯಾಯ ದ್ವೀಪವಿಡೀ ವ್ಯಾಪ್ತಿಗೆ ಬರುತ್ತದೆ. ಇದರಲ್ಲಿ ಗುಜರಾತ್‌ನ ಕೆಲವು ಭಾಗಗಳೂ ಒಳಗೊಳ್ಳುತ್ತದೆ. ರಾಜ್ಯದ ಎಲ್ಲಾ ಆರಾಧಾನಾಲಯಗಳಲ್ಲಿ ತೀವ್ರ ನಿಗಾ ಇರಿಸಲಾಗಿದೆ. ಕರಾವಳಿ ಪ್ರದೇಶದಾ ದ್ಯಂತ ಹೆಚ್ಚುವರಿ ಪೊಲೀಸರನ್ನು ನೇಮಿಸಲಾಗಿದೆ. ಗುಜರಾತ್ ಸಮೀಪದ ಸರ್‌ಕ್ರೀಕ್ ಪ್ರದೇಶದಲ್ಲಿ ಉಗ್ರರು ನುಸುಳಿದ್ದಾರೆಂದು ಶಂಕಿಸಲಾಗುತ್ತಿದೆ. ವಾರೀಸುದಾರರಿಲ್ಲದ ಎರಡು ಬೋಟ್‌ಗಳು ಅಲ್ಲಿ ಪತ್ತೆಯಾಗಿದೆ. ಅದರಿಂದಾಗಿ ಉಗ್ರರು ಈಗಾಗಲೇ ಭಾರತದೊಳಗೆ ನುಸುಳಿರ ಬಹುದೆಂಬ ಶಂಕೆ ಬಲಗೊಂಡಿದೆ. ದಕ್ಷಿಣ ಭಾರತ ರಾಜ್ಯಗಳಲ್ಲಿ ಭಯೋತ್ಪಾದಕ ದಾಳಿಯ ಗುರಿ ಉಗ್ರರು ಇರಿಸಿಕೊಂಡಿದ್ದಾರೆಂದು ಗುಪ್ತಚರ ವಿಭಾಗ ತಿಳಿಸಿದೆ.

ಪಾಕಿಸ್ತಾನ ಕಮಾಂಡೋಗಳ ಕಛ್ ಪ್ರದೇಶದಿಂದ ಜಲ ಮಾರ್ಗವಾಗಿ ಉಗ್ರರು ಭಾರತದೊಳಗೆ ನುಸುಳಿ ಗುಜರಾತ್‌ನಲ್ಲಿ ಭಯೋತ್ಪಾದನಾ ಕೃತ್ಯ ನಡೆಸುವ ಸಾಧ್ಯತೆ ಇದೆ ಎಂದು ಕಳೆದ ವಾರವೇ ಗುಪ್ತಚರ ವಿಭಾಗ ಮುನ್ನೆಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಅಂದಿನಿಂ ದಲೇ ಕಟ್ಟೆಚ್ಚರ ವಹಿಸಲಾಗುತ್ತಿದೆ. ಪಾಕಿಸ್ತಾನದ ಜೈಷ್-ಎ- ಮೊಹಮ್ಮ ದ್ ಸಂಘಟನೆಯ ಸದಸ್ಯರು ಆಳ ಸಮುದ್ರದ ಮೂಲಕ ಭಾರತದಲ್ಲಿ ದಾಳಿ ನಡೆಸುವ ತರಬೇತಿಯನ್ನು ನೀಡುತ್ತಿದೆ ಎಂಬ ಮಾಹಿತಿಯೂ ಭಾರತೀಯ ಗುಪ್ತಚರ ವಿಭಾಗಕ್ಕೆ ಲಭಿಸಿದೆ.

ಉಗ್ರರ ಬೆದರಿಕೆ ಮತ್ತು ಓಣಂ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸರಿಗೆ ರಜೆಯಲ್ಲಿ ನಿಯಂತ್ರಣ ತರಲಾಗಿದೆ.

ಪಾಕಿಸ್ತಾನ ಉಗ್ರ ಸಂಘಟನೆಯಾಗಿದೆ ಜೈಷ್-ಎ-ಮೊಹಮ್ಮದ್  ಮುಖ್ಯಸ್ಥ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮಸೂದ್ ಅಜರ್‌ನನ್ನು ಪಾಕಿಸ್ಥಾನ ಈಗಾಗಲೇ ಜೈಲಿನಿಂದ ಬಿಡುಗಡೆಗೊಳಿಸಿದೆ. ಆತನ ನೇತೃತ್ವದಲ್ಲಿ ಭಾರತದಲ್ಲಿ ದಾಳಿ ನಡೆಸಲು ಪಾಕಿಸ್ಥಾನ ಮುಂದಾಗಿರು ವುದನ್ನು ಗುಪ್ತಚರ ವಿಭಾಗ ಮಾಹಿತಿ ನೀಡಿದೆ. ಇದೇ ವೇಳೆ ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಭಾರತದೊಳಗೆ ನುಸುಳಿದ್ದ ಎಂಟು ಲಷ್ಕರ್ ಉಗ್ರರನ್ನು ಕಾಶ್ಮೀರದಿಂದ ಭಾರತೀಯ ಸೇನಾ ಪಡೆ ಬಂಧಿಸಿದೆ.

NO COMMENTS

LEAVE A REPLY