ಜಾಗತಿ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆಯಲ್ಲಿ ಶೇ. ೧೦.೬೮ರಷ್ಟು ಏರಿಕೆ

0
68

 

ನವದೆಹಲಿ: ಸೌದಿ ಅರೇಬಿಯಾದ ಎರಡು ತೈಲ ಘಟಕಗಳ ಮೇಲೆ ಡ್ರೋನ್ ದಾಳಿ ನಡೆದ ಹಿನ್ನೆಲೆಯಲ್ಲಿ ತೈಲ ಉತ್ಪಾದನೆ ಸ್ಥಗಿತಗೊಂಡಿದ್ದು, ಅದರ ಪರಿಣಾಮ ಜಾಗತಿಕ ಮಾರುಕಟ್ಟೆಯ ಕಚ್ಛಾ ತೈಲ ಬೆಲೆಯಲ್ಲಿ ಶೇ. ೧೦.೬೮ರಷ್ಟು ಹೆಚ್ಚಳವುಂಟಾಗಿದೆ.

ಇಂದು ಬೆಳಗ್ಗಿನ ವಹಿವಾಟು ಆರಂಭಕ್ಕೆ ತೈಲ ಬೆಲೆಯಲ್ಲಿ ವೆಸ್ಟ್ ಟೆಕ್ಲಾಸ್ ಇಂಟರ್ ಮೀಡಿಯೇಟ್ ಶೇ. ೧೦.೬೮ರಷ್ಟು ಏರಿಕೆಯಾಗಿ ಡಾಲರ್ ೬೦.೭೧, ಬ್ರೈಂಟ್ ಶೇ. ೧೧.೭೭ ಏರಿಕೆಯಾಗಿ ಡಾಲರ್ ೬೭.೩೧ರಷ್ಟಾಗಿದೆ. ಕಚ್ಛಾ ತೈಲಗಳ ಬೆಲೆ ಇಷ್ಟೊಂದು ಪ್ರಮಾಣ ಹೆಚ್ಚಾಗಿರುವುದು ಕಳೆದ ೨೮ ವರ್ಷಗಳಿಂದ ಇದು ಪ್ರಥಮವಾಗಿದೆ.

ಯೆಮನ್ ಸಮೀಪವಿರುವ ತೈಲ ಘಟಕಗಳ ಮೇಲೆ ಟೆಹ್ರಾನ್ ಮೂಲದ ಹೌತಿ ಬಂಡುಕೋರರು ಡ್ರೋನ್ ದಾಳಿ ನಡೆಸಿದ್ದರು.  ಅದರಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲ ಪೂರೈಕೆಯಲ್ಲಿ ಶೇ. ೬ರಷ್ಟು ಇಲ್ಲಿಂದ ರಫ್ತು ಆಗುವುದು ಕಡಿಮೆಯಾಗಿದೆ. ವಿಶ್ವದ ಅತೀ ದೊಡ್ಡ ತೈಲ ಉತ್ಪಾದಕ ರಾಷ್ಟ್ರ ಸೌದಿ ಅರೇಬಿಯಾ ಆಗಿದೆ. ಅಲ್ಲಿನ ಪ್ರಮುಖ ತೈಲ ಉತ್ಪಾದಕ ಕಂಪೆನಿಯಾದ ಆರಾಮ್ ಕೋ. ತೈಲ ಘಟಕದ ಮೇಲೆ ಡ್ರೋನ್ ದಾಳಿ ನಡೆದಿದೆ. ಇದರ ಪರಿಣಾಮ ಭಾರತ ಸೇರಿದಂತೆ ಇತರ ಹಲವು ರಾಷ್ಟ್ರಗಳಿರುವ ಕಚ್ಛಾ ತೈಲ ಪೂರೈಕೆ ಮೇಲೆ ಪ್ರತಿಕೂಲ ಪರಿಣಾಮ ಬೀರತೊಡಗಿದ್ದು ಅದು ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೇರಿಕೆಗೆ ದಾರಿ ಮಾಡಿ ಕೊಡುವ ಆತಂಕಕ್ಕೂ ದಾರಿ ಮಾಡಿಕೊಟ್ಟಿದೆ.

NO COMMENTS

LEAVE A REPLY