ಜಿಲ್ಲೆಯ ಹನ್ನೊಂದು ಗ್ರಾಮ ಪಂಚಾಯತ್‌ಗಳ ವಿಭಜನೆ ಸಾಧ್ಯತೆ

0
54

ಕಾಸರಗೋಡು: ಮುಂದಿನ ವರ್ಷ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಯಲಿರುವಂತೆಯೇ ಜಿಲ್ಲೆಯಲ್ಲಿ ಅತೀ ಹೆಚ್ಚು ಜನಸಂಖ್ಯೆ ಮತ್ತು ವಿಸ್ತೀ ರ್ಣ ಹೊಂದಿರುವ ಗ್ರಾಮಪಂಚಾಯ ತ್‌ಗಳನ್ನು ಗುರುತಿಸಿ ಅವುಗಳನ್ನು ವಿಭಜಿ ಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

೨೭೪೩೦ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ, ೩೨ ಚದರ ಅಡಿ ಕಿಲೋ ಮೀಟರ್‌ಗಿಂತ ಹೆಚ್ಚು ವಿಸ್ತೀರ್ಣ ಹೊಂದಿರುವ, ೫೦ ಲಕ್ಷ ರೂ.ಗಿಂತ ಹೆಚ್ಚು ಸ್ವಂತ ಆದಾಯ ಹೊಂದಿರುವ, ಭೌಗೋಳಿಕ ಪ್ರತ್ಯೇಕತೆ ಹೊಂದಿರುವ ಮಾನದಂಡಗಳ ಆಧಾರದಲ್ಲಿ ಪಂಚಾಯತ್‌ಗಳನ್ನು ವಿಭಜಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ಇಂತಹ ಪಂಚಾಯತ್‌ಗಳನ್ನು ಗುರುತಿಸಿ ಈ ತಿಂಗಳ ೨೦ರೊಳಗೆ ಯಾದಿ ಸಲ್ಲಿಸುವಂತೆ ಸರಕಾರ ಎಲ್ಲಾ ಜಿಲ್ಲೆಗಳ ಪಂಚಾಯತ್ ಉಪ ನಿರ್ದೇಶಕರಿಗೆ  ನಿರ್ದೇಶ ನೀಡಿದೆ. ಅದರಂತೆ ಇಂತಹ ಪಂಚಾಯತ್‌ಗಳನ್ನು ಗುರುತಿಸಿ ಯಾದಿ ತಯಾರಿಸುವ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದೆ.

ಜಿಲ್ಲೆಯಲ್ಲಿ ಒಟ್ಟು ೩೮  ಗ್ರಾಮಪಂಚಾಯತ್‌ಗಳಿದ್ದು, ೨೦೧೧ರ ಜನಗಣತಿ ಪ್ರಕಾರ ಜಿಲ್ಲೆಯ ಹನ್ನೊಂದು ಗ್ರಾಮಪಂಚಾಯತ್‌ಗಳಲ್ಲಿ ಮೂವತ್ತು ಸಾವಿರಕ್ಕಿಂತಲೂ ಹೆಚ್ಚು ಜನಸಂಖ್ಯೆ ಹೊಂದಿದೆ. ಸರಕಾರದ ಮಾನದಂಡ ಪ್ರಕಾರ ಈ ಹನ್ನೊಂದು ಪಂಚಾಯತ್ ಗಳನ್ನು ವಿಭಜಿಸಬೇಕಾಗಿ ಬರಲಿದೆ. ಚೆಂಗಳ (೫೬೭೮೧), ಚೆಮ್ನಾಡ್ (೫೪೭೪೭), ಬದಿಯಡ್ಕ (೩೪,೨೦೭), ಅಜಾನೂರು (೪೯,೧೫೩), ಮಧೂರು (೪೧,೪೬೩), ಮಂಗಲ್ಪಾಡಿ (೪೮,೪೪೧), ಪೈವಳಿಕೆ (೩೪,೨೭೪), ಪಳ್ಳಿಕ್ಕೆರೆ (೪೩,೨೫೫), ತೃಕ್ಕರಿಪುರ (೩೮,೬೮೭) ಮತ್ತು ಉದುಮ (೩೭,೫೩೭) ಜಿಲ್ಲೆಯಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಪಂಚಾಯತ್‌ಗಳಾಗಿವೆ.

ಜಿಲ್ಲೆಯಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮ ಪಂಚಾಯತ್ ಚೆಂಗಳ (೫೬,೭೮೧) ಆದರೆ ಅತೀ ಕಡಿಮೆ ಜನ ಸಂಖ್ಯೆ ಹೊಂದಿರುವ ಗ್ರಾಮ ಪಂಚಾಯತ್ ಬೆಳ್ಳೂರು (೧೦,೨೪೧) ಆಗಿದೆ. ವಲಿಯಪರಂಬ ಪಂಚಾಯತ್ (೧೨,೭೯೦) ಅತೀ ಕಡಿಮೆ ಜನಸಂಖ್ಯೆ ಹೊಂದಿರುವ ಜಿಲ್ಲೆಯ ಎರಡನೇ ಗ್ರಾಮ ಪಂಚಾಯತ್‌ಗಳಾಗಿದೆ.

 

NO COMMENTS

LEAVE A REPLY