ಬೈಕ್ ಪ್ರಯಾಣ ವೇಳೆ ಚಿನ್ನಾಭರಣ ಕಾಣೆ

0
49

ಬದಿಯಡ್ಕ: ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಎಂಟು ಪವನ್‌ನ ಚಿನ್ನಾಭರಣ ಕಳೆದು ಹೋದ ಬಗ್ಗೆ ದೂರಲಾಗಿದೆ. ಬೋವಿಕ್ಕಾನ ನಿವಾಸಿ ಮಣಿಕಂಠನ್ ದೂರು ದಾತರಾಗಿದ್ದಾರೆ. ವಿಟ್ಲ ಪೆರುವಾಯಿಯ ಸಂಬಂಧಿಕರ ಮನೆಯಿಂದ ನಿನ್ನೆ ಮಣಿಕಂಠನ್ ಹಾಗೂ ಪತ್ನಿ ಬೈಕ್‌ನಲ್ಲಿ ಮನೆಗೆ ವಾಪಸಾಗಿದ್ದರು.  ಈವೇಳೆ ನೆಕ್ಲೆಸ್, ಮಾಲೆ, ಬ್ರೇಸ್‌ಲೆಟ್ ಮೊದಲಾದ ಚಿನ್ನಾಭರಣವನ್ನು ಬ್ಯಾಗ್‌ನ ಲ್ಲಿಟ್ಟಿದ್ದರು. ಬೈಕ್ ನಲ್ಕಕ್ಕೆ ತಲುಪಿದಾಗ ಬ್ಯಾಗ್‌ನಿಂದ ಚಿನ್ನಾಭರಣಗಳು ಬಿದ್ದ ಬಗ್ಗೆ ತಿಳಿದುಬಂದಿದೆ. ಒಟ್ಟು ೮ ಪವನ್ ಚಿನ್ನಾಭರಣ ಕಾಣೆಯಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಣಿಕಂಠನ್ ಬದಿಯಡ್ಕ ಹಾಗೂ ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ.

NO COMMENTS

LEAVE A REPLY