ಗಾಂಜಾ ಕೈವಶವಿರಿಸಿಕೊಂಡ ಪ್ರಕರಣ: ಇಬ್ಬರಿಗೆ ತಲಾ ೧೦,೦೦೦ ರೂ. ಜುಲ್ಮಾನೆ

0
44

ಕಾಸರಗೋಡು: ಗಾಂಜಾ ಕೈವಶವಿರಿಸಿಕೊಂಡ  ಎರಡು ಭಿನ್ನ ಪ್ರಕರಣಗಳಲ್ಲಾಗಿ ಇಬ್ಬರಿಗೆ ಕಾಸರಗೋಡು ಪ್ರಥಮದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ(೧) ತಲಾ ೧೦೦೦೦ ರೂ.ನಂತೆ ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ೨೦೧೯ ಫೆಬ್ರವರಿ ೮ರಂದು ಆದೂರು ಕುಂಟಾರು ವಿವೇಕಾನಂದ ನಗರದಲ್ಲಿ ೫೦ ಗ್ರಾಂ ಗಾಂಜಾದೊಂದಿಗೆ ಬದಿಯಡ್ಕ ಅಬಕಾರಿ ರೇಂಜ್‌ನ ಅಧಿಕಾರಿಗಳು ಬಂಧಿಸಿದ ಆರೋಪಿ ಕಾಸರಗೋಡು ನಾಯಕ್ ರಸ್ತೆ ಬಳಿಯ ಸುರೇಶ್ ಕೆ. ಭಟ್(೩೮) ಮತ್ತು ೨೦೧೮ ಜೂನ್ ೨೧ರಂದು ಕಾಸರಗೋಡು ರೇಂಜ್‌ನ ಅಬಕಾರಿ ಅಧಿಕಾರಿಗಳ ನೆಲ್ಲಿಕುಂಜೆ ಕಡಪ್ಪುರದಲ್ಲಿ ನಡೆಸಿದ ಕಾರ್ಯಾಚರಣೆ ಯಲ್ಲಿ ೨೧ ಗ್ರಾಂ ಗಾಂಜಾದೊಂದಿಗೆ ಬಂಧಿಸಿದ ನೆಲ್ಲಿಕುಂಜೆ ಕಸಬಾ ಕಡಪ್ಪುರ ಜೆ.ಬಿ. ಹೌಸ್‌ನ ಜಯೇಶ್ ಪಿ.(೩೭) ಎಂಬವರಿಗೆ ನ್ಯಾಯಾಲಯ ಈ ಜುಲ್ಮಾನೆ ವಿಧಿಸಿದೆ.

NO COMMENTS

LEAVE A REPLY