ಬದಿಯಡ್ಕದಲ್ಲಿ ಮರಾಟಿ ದಿನಾಚರಣೆಗೆ ಚಾಲನೆ

0
53

ಬದಿಯಡ್ಕ: ಕೇರಳ ಮರಾಟಿ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ  ಹಮ್ಮಿಕೊಂಡ ೬ನೇ ವಾರ್ಷಿಕ ಮರಾಟಿ ದಿನಾಚರಣೆ ಇಂದು ಬೆಳಿಗ್ಗೆ ಬದಿಯಡ್ಕ ಗುರುಸದನದಲ್ಲಿ ಆರಂಭಗೊಂಡಿತು. ಇದರಂಗವಾಗಿ ಸಮಿತಿಯ ಮಾಜಿ ರಾಜ್ಯ ಅಧ್ಯಕ್ಷ ಕೃಷ್ಣ ನಾಯ್ಕ ಪೆಲ್ತಾಜೆ ಧ್ವಜಾ ರೋಹಣ ನಡೆಸಿದರು. ಶ್ಯಾಮ ಪ್ರಸಾದ್ ಮಾನ್ಯ, ರಾಧಾಕೃಷ್ಣ ಪೈಕ, ಸುಬ್ರಾಯ ನಾಯ್ಕ್  ವಿಶ್ವನಾಥ,  ನಾರಾಯಣ ಅಡ್ಕಸ್ಥಳ, ರಾಧಾಕೃಷ್ಣ ಮೊದಲಾದವರು ಉಪಸ್ಥಿತರಿದ್ದರು. ಸಂಜೆ ೩ ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

NO COMMENTS

LEAVE A REPLY