ಕಾರಿನಲ್ಲಿ ಸಾಗಿಸುತ್ತಿದ್ದ ಪಾನ್‌ಮಸಾಲೆ ಸಹಿತ ಸೆರೆ

0
42

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ ೨೮೦೦ ಪ್ಯಾಕೆಟ್ ಪಾನ್‌ಮಸಾಲೆ ಸಹಿತ ಓರ್ವನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಇಂದು ಬೆಳಿಗ್ಗೆ ಬೇಕಲದಲ್ಲಿ ಪೊಲೀಸ್ ಕಾರ್ಯಾಚರಣೆ ನಡೆದಿದೆ. ಈ ಸಂಬಂಧ ತೃಕರಿಪುರ ನಿವಾಸಿ ಮಿರ್ಶಾದ್ (೩೪) ಎಂಬಾತನನ್ನು ಬಂಧಿಸಲಾಗಿದೆ. ಉಪ ಚುನಾವಣೆ ಪ್ರಯುಕ್ತ ಪೊಲೀಸರು ಬೇಕಲದಲ್ಲಿ ವಾಹನ ತಪಾಸಣೆ ನಡೆಯುತ್ತಿದ್ದಾಗ ಸ್ವಿಪ್ಟ್ ಕಾರಿನಲ್ಲಿ ಸಾಗಿಸುತ್ತಿದ್ದ ಪಾನ್ ಮಸಾಲೆ ಪತ್ತೆಯಾಗಿದೆ.

ಗೋಣಿ ಚೀಲಗಳಲ್ಲಿ ತುಂಬಿ ಸಿದ್ದ ಪಾನ್‌ಮಸಾಲೆಯನ್ನು ಕಾರಿನ ಢಿಕ್ಕಿಯೊಳಗೆ ಬಚ್ಚಿಡಲಾಗಿತ್ತು.

NO COMMENTS

LEAVE A REPLY