ಉಗ್ರರು ನುಸುಳಿದ ಬಗ್ಗೆ ಮಾಹಿತಿ: ದಿಲ್ಲಿಯಲ್ಲಿ ಕಟ್ಟೆಚ್ಚರ

0
56

ಹೊಸದಿಲ್ಲಿ: ಆತ್ಮಾಹುತಿ ದಾಳಿ ನಡೆಸುವ ಭಾರೀ ಸಂಚಿನೊಂದಿಗೆ ಪಾಕ್ ಮೂಲಕ ಜೈಷ್-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆಗೆ ಸೇರಿದ ನಾಲ್ವರು ಉಗ್ರರು ದಿಲ್ಲಿಗೆ ನುಸುಳಿರುವು ದಾಗಿ ಕೇಂದ್ರ ಗುಪ್ತಚರ ವಿಭಾಗ ಮುನ್ನೆಚ್ಚರಿಕೆ ನೀಡಿದೆ.

ವಿಶೇಷವಾಗಿ ಭಾರತೀಯ ವಾಯುನೆಲೆಯನ್ನೇ ಪ್ರಧಾನ ಗುರಿಯನ್ನಾಗಿಸಿ ಆತ್ಮಾಹುತಿ ದಾಳಿ ನಡೆಸುವ ಸಂಚನ್ನು ಉಗ್ರರು ಹಾಕಿಕೊಂಡಿ ದ್ದಾರೆ. ಅದಕ್ಕಾಗಿ ಜೈಷ್-ಎ-ಮೊಹಮ್ಮದ್ ಸಂಘಟನೆಯ ಮೂರು ಯಾ ನಾಲ್ವರು ಉಗ್ರರು ದಿಲ್ಲಿಗೆ ತಲುಪಿ ಗುಪ್ತ ಕೇಂದ್ರದಲ್ಲಿ ಅವಿತುಕೊಂಡಿದ್ದಾರೆಂದು ಗುಪ್ತಚರ ವಿಭಾಗ ತಿಳಿಸಿದೆ.

ಗುಪ್ತಚರ ವಿಭಾಗ ನೀಡಿದ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ದಿಲ್ಲಿ ನಗರ ಮತ್ತು ಪರಿಸರಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ವಿಶೇಷವಾಗಿ ವಾಯು ಮತ್ತು ಭೂಸೇನಾ ನೆಲೆಗಳು, ವಿಮಾನ ನಿಲ್ದಾಣಗಳು, ಸಂಸತ್ ಮತ್ತಿತರ ಪ್ರಧಾನ ಕೇಂದ್ರಗಳಲ್ಲಿ ಇನ್ನಷ್ಟು ಹೆಚ್ಚಿನ ಭದ್ರತೆ ಏರ್ಪಡಿಸಲಾಗಿದೆ. ದಿಲ್ಲಿಯ ಪ್ರತಿ ಮೂಲೆ ಮೂಲೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತು ಏರ್ಪ ಡಿಸಲಾಗಿದೆ. ಎಲ್ಲಾ ವಾಹನಗಳನ್ನು ಬಿಗಿ ತಪಾಸಣೆಗೊಳಪಡಿಸಿದ ಬಳಿಕವಷ್ಟೇ ಬಿಡಲಾಗುತ್ತಿದೆ. ದಿಲ್ಲಿ ಮಾತ್ರವಲ್ಲ, ಜಮ್ಮುಕಾಶ್ಮೀರ ಮತ್ತು ಪಂಜಾಬ್‌ನಲ್ಲ್ಲೂ ಇದೇ ರೀತಿಯ ದಾಳಿ ನಡೆಸುವ ಸಂಚಿನೊಂದಿಗೆ ಉಗ್ರರು ನುಸುಳಿರು ವುದಾಗಿಯೂ ಭಾರತೀಯ ಸೇನಾ ನೆಲೆ ಮತ್ತು ವಾಯುನೆಲೆ ಮೇಲೆ ಉಗ್ರರು ಪ್ರಧಾನವಾಗಿ ದಾಳಿ ಸಂಚು ಹೂಡುವ ಸ್ಕೆಚ್ ಹೂಡಿರುವುದಾಗಿ ಗುಪ್ತಚರ ವಿಭಾಗ ಮುನ್ನೆಚ್ಚರಿಕೆ ನೀಡಿದೆ. ಅದರಿಂದಾಗಿ ಆ ಎರಡು ರಾಜ್ಯಗಳಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ.

NO COMMENTS

LEAVE A REPLY