ಜಿಲ್ಲಾ ಆಸ್ಪತ್ರೆಯಲ್ಲಿ ಯುವಕನ ದಾಂಧಲೆ

0
52

ಹೊಸದುರ್ಗ: ಆಸ್ಪತ್ರೆಗೆ ಅತಿಕ್ರಮಿಸಿ ನುಗ್ಗಿದ ಯುವಕ ಸ್ಟಾಫ್ ನರ್ಸ್‌ಗೆ  ಹಲ್ಲೆಗೈದು ಮೊಬೈಲ್ ಫೋನ್‌ನಲ್ಲಿ ಫೋಟೋ ಸೆರೆಹಿಡಿದು ಬೆದರಿಕೆಯೊಡ್ಡಿದ ಬಗ್ಗೆ ದೂರಲಾಗಿದೆ. ನಿನ್ನೆ ರಾತ್ರಿ ೯ ಗಂಟೆಗೆ ಕಾಞಂಗಾಡ್ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಆಸ್ಪತ್ರೆಯ  ಸ್ಟಾಫ್ ನರ್ಸ್‌ನ ದೂರಿನಂತೆ  ಮಾನಭಂಗ,  ಕರ್ತವ್ಯ ನಿರ್ವಹಣೆಗೆ ಅಡ್ಡಿ ಮೊದಲಾದ ಕಾಯ್ದೆ ಪ್ರಕಾರ  ಯುವಕನ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ದಾಖಲಾದ ಅನ್ನಮ್ಮ ಎಂಬ ರೋಗಿಯ ಮಗ ಈ ದಾಂಧಲೆ ನಡೆಸಿರುವುದಾಗಿ ಹೇಳಲಾಗುತ್ತಿದೆ. ಈತ ತಾಯಿಯ ಶುಶ್ರೂಷೆಗಾಗಿ ತಲುಪಿದ್ದನು.  ಈಮಧ್ಯೆ ಡ್ಯೂಟಿ ರೂಂಗೆ ಅತಿಕ್ರಮಿಸಿ ನುಗ್ಗಿದ ಈತ ಸ್ಟಾಫ್ ನರ್ಸ್‌ಗೆ ಹಲ್ಲೆಗೈದು ಅಸಭ್ಯ ನುಡಿದಿದ್ದಾನೆ. ಅಲ್ಲದೆ ನರ್ಸ್‌ನ ಭಾವಚಿತ್ರವನ್ನು ಮೊಬೈಲ್ ಫೋನ್ ನಲ್ಲಿ ಸೆರೆಹಿಡಿದು ಬೆದರಿಕೆಯೊಡ್ಡಿ ರುವುದಾಗಿ ದೂರಲಾಗಿದೆ.

NO COMMENTS

LEAVE A REPLY