ವಾಹನ ಢಿಕ್ಕಿ ಹೊಡೆದು ಯುವತಿಗೆ ಗಂಭೀರ

0
56

ಹೊಸದುರ್ಗ: ಅಪರಿಚಿತ ವಾಹನ ಢಿಕ್ಕಿ ಹೊಡೆದು ಯುವತಿ ಗಂಭೀರ ಗಾಯಗೊಂಡಿದ್ದಾಳೆ. ಕೋಟಚ್ಚೇರಿ ಟ್ರಾಫಿಕ್ ಸರ್ಕಲ್ ಬಳಿ ಮೊನ್ನೆ ಅಪಘಾತವುಂಟಾಗಿದೆ. ಗಂಭೀರ ಸ್ಥಿತಿಯಲ್ಲಿರುವ ಕಳನಾಡು ಮೇಲ್ಸೇತುವೆ ಬಳಿಯ ತೊಟ್ಟಿಯಿಲ್ ಹೌಸ್‌ನ ಸಿ.ಕೆ. ವಿಜಯನ್‌ರ ಪತ್ನಿ ಕೆ.ಎಂ. ಬಿಂದು (೪೭)ರನ್ನು ಮಂಗಳೂರಿನ ಆಸ್ಪತ್ರೆ ಯಲ್ಲಿ ದಾಖಲಿಸಲಾಗಿದೆ. ಬಿಂದು ರಸ್ತೆ ನಡೆದು ಹೋಗುತ್ತಿದ್ದಾಗ ಅಪರಿ ಚಿತ ವಾಹನ ಢಿಕ್ಕಿ ಹೊಡೆದಿತ್ತು. ಅಪಘಾತದ ಬಳಿಕ ವಾಹನ ನಿಲ್ಲಿಸದೆ ಪರಾರಿಯಾಗಿದೆ. ಆದ್ದರಿಂದ ಯಾವ ವಾಹನವೆಂದು ತಿಳಿಯಲು ಸಾಧ್ಯವಾಗಲಿಲ್ಲ. ಹೊಸದುರ್ಗ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

NO COMMENTS

LEAVE A REPLY