ದೇಲಂಪಾಡಿ ಪರಪ್ಪೆಯಲ್ಲಿ ಕಳ್ಳರ ಹಾವಳಿ: ಎರಡು ಮನೆಗಳಿಂದ ೪೨ ಪವನ್ ಚಿನ್ನಾಭರಣ ಕಳವು

0
38

ದೇಲಂಪಾಡಿ: ಇಲ್ಲಿನ ಪರಪ್ಪೆ ಎಂಬಲ್ಲಿ ಎರಡು ಮನೆಗಳಿಗೆ ಕಳ್ಳರು ನುಗ್ಗಿ ಸುಮಾರು ೪೨ ಪವನ್ ಚಿನ್ನಾಭರಣ ದೋಚಿದ್ದಾರೆ.

ಪರಪ್ಪೆಯ ಅಬ್ದುಲ್ ರಹಿಮಾನ್‌ರ ಮನೆಯಿಂದ ೪೧ ಪವನ್ ಹಾಗೂ ಸಮೀಪದ ಸಲಾವುದ್ದೀನ್‌ರ ಮನೆಯಿಂದ ಒಂದು ಪವನ್ ಚಿನ್ನಾಭರಣ, ೨೫೦೦ ರೂ., ಕಳವಿಗೀಡಾಗಿದೆ. ಈ  ಎರಡು ಮನೆಗಳಿಂದ ಆದಿತ್ಯವಾರ ಮುಳ್ಳೇರಿಯದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ನಿನ್ನೆ ಸಂಜೆ ಮನೆಗಳಿಗೆ  ಮರಳಿದಾಗಲೇ ಕಳವು ವಿಷಯ ತಿಳಿದುಬಂದಿದೆ.

ಎರಡೂ ಮನೆಗಳ ಹಿಂಭಾಗದ ಬಾಗಿಲು ಮುರಿದು ಕಳ್ಳರು ಒಳಗೆ ಪ್ರವೇಶಿಸಿದ್ದಾರೆ. ಎರಡೂಮನೆಗಳ ಬೆಡ್‌ರೂಂ ನಲ್ಲಿರಿಸಿದ್ದ ಕಪಾಟುಗಳನ್ನು ಮುರಿದು ಅಲ್ಲಿದ್ದ ಚಿನ್ನಾಭರಣ ದೋಚಲಾಗಿದೆ.

ಬೆರಳಚ್ಚು ತಜ್ಞರು ಸ್ಥಳಕ್ಕೆ ತಲುಪಿದ್ದು, ಕಳ್ಳರದ್ದೆನ್ನಲಾದ ಬೆರಳಚ್ಚು ಲಭಿಸಿರುವುದಾಗಿ ಸೂಚನೆಯಿದೆ. ಪೊಲೀಸರು ತನಿಖೆ ತೀವ್ರಗೊ ಳಿಸಿದ್ದಾರೆ.

NO COMMENTS

LEAVE A REPLY