ಹೊಗೆಸೊಪ್ಪು ಉತ್ಪನ್ನ ಬೇಟೆ: ೭ ಕಿಲೋ, ೨೭ ಪ್ಯಾಕೆಟ್ ಸಹಿತ ಇಬ್ಬರ ಸೆರೆ

0
13

ಉಪ್ಪಳ: ಟೂರಿಸ್ಟ್ ಬಸ್‌ನಲ್ಲಿ ಸಾಗಿಸುತ್ತಿದ್ದ ೭ ಕಿಲೋ ಹೊಗೆಸೊಪ್ಪು ಉತ್ಪನ್ನಗಳನ್ನು ವಾಮಂಜೂರು ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಅಧಿಕಾರಿಗಳು ವಶಪಡಿಸಿದ್ದಾರೆ. ಆರೋಪಿ ಕೊಟ್ಟಾರಕ್ಕರೆ ನಿವಾಸಿ ರತೀಶ್ (೩೫)ನನ್ನು ಸೆರೆ ಹಿಡಿದಿದ್ದಾರೆ. ನಿನ್ನೆ ಸಂಜೆ ಮಂಗಳೂರು ಭಾಗದಿಂದ ಬರುತ್ತಿದ್ದ ಟೂರಿಸ್ಟ್ ಬಸ್‌ನ್ನು ತಪಾಸಣೆ ನಡೆಸಿದಾಗ ಹೊಗೆಸೊಪ್ಪು ಉತ್ಪನ್ನ ಪತ್ತೆಯಾಗಿದೆ. ಅಬಕಾರಿ ಸಿ.ಐ. ಸಚ್ಚಿದಾನಂದನ್, ಎಕ್ಸೈಸ್ ಇನ್‌ಸ್ಪೆಕ್ಟರ್ ಸಚಿನ್ ನೇತೃತ್ವ ನೀಡಿದರು.

ಇದೇ ವೇಳೆ ಮಂಜೇಶ್ವರ ಪೊಲೀಸರು ಪಾನ್‌ಮಸಾಲೆ ಸಹಿತ ಓರ್ವನನ್ನು ಸೆರೆ ಹಿಡಿದಿದ್ದಾರೆ. ನೀರೊಳಿಕೆ ನಿವಾಸಿ ಇಬ್ರಾಹಿಂ (೪೧)ನನ್ನು ೨೭ ಪ್ಯಾಕೆಟ್ ಪಾನ್‌ಮಸಾಲೆ ಸಹಿತ ಗುವೆದಪಡ್ಪು ರಸ್ತೆ ಬದಿಯಿಂದ ಸೆರೆ ಹಿಡಿಯಲಾಗಿದೆ. ಮಂಜೇಶ್ವರ ಎಸ್.ಐ. ಶ್ರೀದಾಸ್ ನೇತೃತ್ವ ನೀಡಿದ್ದರು.

NO COMMENTS

LEAVE A REPLY