ಆಸ್ತಿಗಾಗಿ ಆರು ಮಂದಿಯ ಸರಣಿ ಕೊಲೆ: ಮೂವರ ಸೆರೆ; ಇನ್ನಷ್ಟು ಬಂಧನ ಶೀಘ್ರ:  ಫೋನ್ ಕರೆ ಪರಿಶೀಲನೆ

0
18

ಕಲ್ಲಿಕೋಟೆ: ಆಸ್ತಿಗಾಗಿ ಕಳೆದ ಹದಿನಾಲ್ಕು ವರ್ಷದಲ್ಲಿ ಪತಿ, ಅತ್ತೆ ಸೇರಿದಂತೆ ಆರು ಮಂದಿಯನ್ನು ಕೊಲೆಗೈದ ಪ್ರಕರಣದ ಪ್ರಧಾನ ಆರೋಪಿ ತಾಮರಶ್ಶೇರಿ ಕೂಟತ್ತಾಯಿ ಪೊನ್ಮಾಟ್ಟಂ ಜೋಳಿಯಮ್ಮ ಜೋಸೆಫ್(೪೭) ಸೇರಿದಂತೆ ಮೂವರನ್ನು ಕಣ್ಣೂರು ಜಿಲ್ಲಾ ಕ್ರೈಮ್ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.

ಜೋಳಿಯ ಸಂಬಂಧಿಕ ಕಾಕಾ ಡ್ ಕಾರಾವಯಲ್ ಮಂಙಾಡಿ ಮ್ಯಾಥ್ಯು ಯಾನೇ ಶಾಜಿ(೪೩) ಮತ್ತು ಕೊಲೆಗೈಯ್ಯಲು ಸಯನೈಡ್ ಪೂರೈಸಿದ ಪಳ್ಳಿಪುರಂ ತಚ್ಚಂಪೊಯಿಲ್‌ನ ಮುಲ್ಲಂಬಲತ್ತಿಲ್ ಪ್ರಜಿ ಕುಮಾರ್ (೪೮) ಎಂಬವರು  ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಇತರ ಇಬ್ಬರು ಆರೋಪಿಗಳಾಗಿದ್ದಾರೆ. ಈ ಪ್ರಕರಣದಲ್ಲಿ ಇನ್ನು ಹಲವರು ಶಾಮೀಲಾಗಿದ್ದಾರೆಂದು ಅದರಿಂದಾಗಿ ಆರೋಪಿಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿಕ್ಷಣ ಇಲಾಖೆಯ ನಿವೃತ್ತ ಉದ್ಯೋಗಿ ಕೂಟತ್ತಾಯಿ ನಿವಾಸಿ ಪೊನ್ಮಾಟ್ಟಂ ಟೋಮ್ ಜೋಸ್(೬೬), ಅವರ ಪತ್ನಿ ನಿವೃತ್ತ ಅಧ್ಯಾಪಿಕೆ ಅನ್ನಮ್ಮ ಥೋಮಸ್(೫೭), ರೋಯ್ ಥೋಮಸ್(೪೬), ಅನ್ನಮ್ಮರ ಸಹೋದರ ಎಂ.ಎಂ. ಮ್ಯಾಥ್ಯೂ(೬೫), ಟೋಮ್‌ರ ಸಹೋದರ ಪುತ್ರ ಶಾಜು ಸ್ಕರಿಯಾರ ಪತ್ನಿ ಸಿಲಿ(೪೪) ಮತ್ತು ಆಕೆಯ ಪುತ್ರಿ ಅಲ್ಫೋನ್ಸ್(೨) ಎಂಬವರನ್ನು ೨೦೦೨ ಅಗೋಸ್ತು ೨೨ರಿಂದ ೨೦೧೬ ಜನವರಿ ೧೧ರೊಳಗಾಗಿ ಹಲವು ಸಮಯಗಳಲ್ಲಾಗಿ ಆಹಾರದಲ್ಲಿ ಸಯನೈಡ್ ಬೆರೆಸಿ ಕೊಲೆಗೈದು ಆತ್ಮಹತ್ಯೆ ಮಾಡಲಾಗಿದೆ ಎಂದು ಪ್ರತೀತಿ ಮಾಡಲಾಗಿತ್ತು. ಕೊಲೆಗೈಯ್ಯಲ್ಪಟ್ಟ ಟೋಮ್‌ರ ಇನ್ನೋರ್ವ ಪುತ್ರ ರೋಜೋ ಶಂಕೆ ವ್ಯಕ್ತಪಡಿಸಿ ದೂರು ನೀಡಿ, ಆ ಬಗ್ಗೆ ಪೊಲೀಸರು ಸಮಗ್ರ ತನಿಖೆ ಆರಂಭಿಸಿದಾಗಲೇ ಆರು ಮಂದಿಯ ಸಾವು ಆತ್ಮಹತ್ಯೆಯಲ್ಲ, ಕೊಲೆ ಯೆಂದು ಸತ್ಯ ಬಹಿರಂಗಗೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಜೋಳಿಯ ಮೊಬೈಲ್ ಫೋನ್ ಕರೆಗಳನ್ನು ಪೊಲೀಸರು ಪರಿಶೀಲಿ ಸುತ್ತಿದ್ದಾರೆ. ಮಾತ್ರವಲ್ಲ, ಇನ್ನು ಹಲವರ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಮಾತ್ರವ ಲ್ಲ, ಆಕೆಯ ಪತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಿಸು ತ್ತಿದ್ದಾರೆ. ಅದರಿಂದಾಗಿ ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಬಂಧನಕ್ಕೊ ಳಗಾಗುವ ಸಾಧ್ಯತೆ ಇದೆ.

NO COMMENTS

LEAVE A REPLY