ಪರಾಕಾಷ್ಠೆಗೇರತೊಡಗಿರುವ ಪ್ರಚಾರ ಕಾವು

0
17

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಈ ತಿಂಗಳ ೨೧ರಂದು ನಡೆಯಲಿರುವ ಉಪ ಚುನಾವಣೆಯ ಪ್ರಚಾರ ದಿನೇ ದಿನೇ ಪರಾಕಾಷ್ಠೆಗೇರುತ್ತಿದ್ದು ಇದರ ಅಂಗವಾಗಿ ಬಿಜೆಪಿ, ಕಾಂಗ್ರೆಸ್, ಮುಸ್ಲಿಂ ಲೀಗ್ ಮತ್ತು ಎಡರಂಗದ ನಾಯಕರ ದಂಡು ಮಂಜೇಶ್ವರಕ್ಕೆ ತಲುಪಿ ಪ್ರಚಾರ ಸಕ್ರಿಯಗೊಳಿಸಿದೆ.

ಇದರಂತೆ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಇಂದು ಬೆಳಿಗ್ಗೆ ಕಾಸರಗೋಡಿಗೆ ಆಗಮಿಸಿದ್ದಾರೆ. ಅವರು ಇಂದು ನಾಲ್ಕು ಕುಟುಂಬ ಸಂಗಮ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇದರಂತೆ ಇಂದು ಬೆಳಿಗ್ಗೆ ಕಿದೂರು ಕುಂಟಂಗೇರಡ್ಕ ಹಾಗೂ ಮಜೀರ್ಪಳ್ಳದಲ್ಲಿ ನಡೆದ ಕುಟುಂಬ ಸಂಗಮ ಕಾರ್ಯಕ್ರಮದಲ್ಲಿ  ಪಾಲ್ಗೊಂಡರು. ಅಪರಾಹ್ನ ೩ ಗಂಟೆಗೆ ಮಣ್ಣಂಗುಳಿಯಲ್ಲಿ, ೫ ಗಂಟೆಗೆ ಮಜೇಶ್ವರದಲ್ಲಿ ನಡೆಯುವ ಕುಟುಂಬ ಸಂಗಮ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಯುಡಿಎಫ್ ಉಮೇದ್ವಾರ ಎಂ.ಸಿ ಖಮರುದ್ದೀನ್‌ರ ಚುನಾವಣಾ ಪ್ರಚಾರದಂಗವಾಗಿ ಯೂತ್ ಫೋರ್ ಎಂ.ಸಿ ಎಂಬ ಪ್ರಚಾರ ಕಾರ್ಯಕ್ರಮಕ್ಕೆ ಯುಡಿಎಫ್ ಆರಂಭಿಸಿದ್ದು, ಇಂದು ಸಂಜೆ ೪ ಗಂಟೆಗೆ ಉಪ್ಪಳ ಪೇಟೆಯಲ್ಲಿ ಮುಸ್ಲಿಂ ಲೀಗ್ ನೇತಾರ ಅಬ್ದುಲ್ ಸಮದ್ ಸಮದಾನಿ ಉದ್ಘಾಟಿಸುವರು. ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಪ್ರಧಾನ ಭಾಷಣ ಮಾಡುವರು. ಸಂಸದೆ ರಮ್ಯಾ ಹರಿದಾಸ್, ಶಾಸಕ ಕೆ.ಎಂ. ಶಾಜಿ, ಯೂತ್ ಕಾಂಗ್ರೆಸ್ ನೇತಾರ ಸಂಸದ ಡೀನ್ ಕುರ‍್ಯಾಕೋಸ್, ಮುಸ್ಲಿಂ ಲೀಗ್ ನೇತಾರ ಪಾಣಕ್ಕಾಡ್ ಮುನವರಲಿ ಶಿಹಾಬ್ ತಂಙಳ್, ಪಿ.ಕೆ. ಫಿರೋಜ್, ವಿ.ಟಿ. ಬಲರಾಮ್, ದಕ್ಷಿಣಕನ್ನಡ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಮಿಥುನ್ ರೈ ಮೊದಲಾದವರು  ಮಾತನಾಡುವರು.

ರಮೇಶ್ ಚೆನ್ನಿತ್ತಲ ನಾಳೆಯೂ ಮಂಜೇಶ್ವರದರುವರು. ನಾಳೆ ಬೆಳಿಗ್ಗೆ ೯ ಗಂಟೆಗೆ ಮೀಯಪದವಿನಿಂದ ಆರಂs ಗೊಳ್ಳುವ ಯುಡಿಎಫ್ ಚುನಾವಣಾ ಪ್ರಚಾರ ಪರ್ಯಟನೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸುವರು. ಬಳಿಕ ೧೧ ಗಂಟೆಗೆ ಉಪ್ಪಳ ವ್ಯಾಪಾರ ಭವನ, ಅಪರಾಹ್ನ ೩ ಗಂಟೆಗೆ ಎಣ್ಮಕಜೆಯ ಬಣ್ಪುತ್ತಡ್ಕ ಮತ್ತು ೪ ಗಂಟೆಗೆ ಪೈವಳಿಕೆಯಲ್ಲಿ ನಡೆಯಲಿರುವ ಯುಡಿಎಫ್ ಪ್ರಚಾರ ಸಭೆಗಳಲ್ಲಿ  ಭಾಗವಹಿಸಿ ಮಾತನಾಡುವರು.

ಇನ್ನೊಂದೆಡೆ ಎನ್‌ಡಿಎ ಉಮೇದ್ವಾರ ರವೀಶ್ ತಂತ್ರಿಯವರ ಗೆಲುವಿಗಾಗಿ ಬಿಜೆಪಿ ಮಂಜೇಶ್ವರ ವಿಧಾನಸಭಾ ವ್ಯಾಪ್ತಿಯಲ್ಲಿ ಕಾರ್ನರ್ ಸಭೆಗಳನ್ನು ಆರಂಭಿಸಲಿದ್ದು, ಅದನ್ನು ನಾಳೆ ಬೆಳಿಗ್ಗೆ ಕುಂಬಳೆ ನಾಯ್ಕಾಪುನಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಪಿ.ಎಸ್. ಶ್ರೀಧರನ್‌ಪಿಳ್ಳೆ ಉದ್ಘಾಟಿಸುವರು. ಬಿಜೆಪಿಯ ನೇತಾರರೂ  ಭಾಗವಹಿಸುವರು. ಮಾತ್ರವಲ್ಲ ಬಿಜೆಪಿ ಪ್ರತ್ಯೇಕ ಪ್ರತ್ಯೇಕ ಸ್ಕ್ವಾಡ್‌ಗಳಿಗೂ ರೂಪು ನೀಡಿ ಮನೆ ಮನೆಗಳಿಗೆ ಸಂದರ್ಶಿಸಿ ಗೃಹ ಸಂಪರ್ಕ ಅಭಿಯಾನಕ್ಕೂ ಚಾಲನೆ ನೀಡಿದೆ.

ಎಡರಂಗದ ಪ್ರಚಾರದಂಗವಾಗಿ ಕಂದಾಯ ಸಚಿವ ಇ. ಚಂದ್ರಶೇಖರನ್ ಸೇರಿದಂತೆ ಹಲವರು ಇಂದು ಮಂಜೇಶ್ವರದ ವಿವಿಧೆಡೆಗಳಲ್ಲಿ ಪ್ರಚಾರ ನಡೆಸಲಿದ್ದಾರೆ.

ಎಡರಂಗದ ಅಭ್ಯರ್ಥಿ ಶಂಕರ್ ರೈಯವರು ಇಂದು ಬೆಳಿಗ್ಗೆ ಎಣ್ಮಕಜೆ ಪಂಚಾಯತ್‌ನ ಕಾಟುಕುಕ್ಕೆಯಲ್ಲಿ ಮನೆಗಳಿಗೆ ಸಂದರ್ಶಿಸಿ ಮತ ಯಾಚಿಸಿದರು. ನಾಳೆ ಪೈವಳಿಕೆ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಸಂದರ್ಶನ ನಡೆಸುವರು.

NO COMMENTS

LEAVE A REPLY