ಸಮುದ್ರದಲ್ಲಿ ಮೀನಿನ ಬಲೆಗೆ ಸಿಲುಕಿ ವ್ಯಕ್ತಿ ಮೃತ್ಯು

0
46

ಮಂಜೇಶ್ವರ: ಸಮುದ್ರದಲ್ಲಿ ಮೀನು ಹಿಡಿ ಯಲು ಹಾಕಿದ್ದ ಬಲೆಗೆ ಸಿಲುಕಿ ವ್ಯಕ್ತಿ ಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಕಣ್ವತೀರ್ಥ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಬಳಿಯ ನಿವಾಸಿ ಸುಧಾಕರ (೬೦) ಎಂಬವರು ಮೃತಪಟ್ಟ ವ್ಯಕ್ತಿ.  ಮೀನು ಕಾರ್ಮಿಕರೂ ಆಗಿದ್ದ ಇವರು ಉಚ್ಚಿಲ ನರಹರಿಗುಡ್ಡೆ ಶ್ರೀ ವಿಷ್ಣುಮೂರ್ತಿ ಕ್ಷೇತ್ರದಲ್ಲಿ ಅರ್ಚಕರಾಗಿ ಕೆಲಸ ನಿರ್ವಹಿಸುತ್ತಿದ್ದರು.

ನಿನ್ನೆ ಅಪರಾಹ್ನ ೨.೩೦ರ ವೇಳೆ ಇವರು ಕಣ್ವತೀರ್ಥ ಸಮುದ್ರದಲ್ಲಿ ಮೀನು ಹಿಡಿಯಲು ಬಲೆ ಬೀಸಿ ಬಂದಿದ್ದರು. ಸಂಜೆ ೪.೩೦ರ ವೇಳೆ ಸಮುದ್ರಕ್ಕೆ ತೆರಳಿ ಬಲೆ ಎಳೆಯುತ್ತಿದ್ದಂತೆ ಅದಕ್ಕೆ ಅವರು ಸಿಲುಕಿಕೊಂಡಿದ್ದಾರೆ.  ಈ ವೇಳೆ ಬಲವಾದ ಅಲೆಗಳು ಅವರನ್ನು ಬಲೆ ಸಹಿತ ದಡಕ್ಕೆ ಎಸೆದಿತ್ತು. ಇದನ್ನು ಕಂಡ ಸ್ಥಳೀಯರು  ಕೂಡಲೇ ಸುಧಾಕರರನ್ನು ಬಲೆಯಿಂದ ಬಿಡಿಸಿ ಆಸ್ಪತ್ರೆಗೆ ಸಾಗಿಸುವ  ಮಧ್ಯೆ ಅವರು ಮೃತಪಟ್ಟರೆನ್ನಲಾಗಿದೆ.  ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯಲ್ಲಿರಿಸಿದ್ದು, ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ. ಮೃತರು ಪತ್ನಿ ವಸಂತಿ, ಮಕ್ಕಳಾದ ಸುಕೇಶ್, ಪವನ್, ಚೇತನ್,  ಸಹೋದರ-ಸಹೋದರಿಯರಾದ ಮೋಹನ್ ಯಾನೆ ಮುರಳಿ, ರೇವತಿ, ವಾರಿಜಾ, ಚಂಪಾ, ಸುಜಾತಾ ಹಾಗೂ ಅಪಾರ ಬಂಧ-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY