ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ: ನಾಲ್ವರ ಸೆರೆ

0
36

ಕಾಸರಗೋಡು: ಚೆರ್ಕಳದ ಹೋಟೆಲೊಂದರ ಸಮೀಪದ ಹಿತ್ತಿಲಲ್ಲಿ ನಡೆಯುತ್ತಿದ್ದ ಜೂಜಾಟ ಕೇಂದ್ರಕ್ಕೆ ವಿದ್ಯಾನಗರ ಇನ್‌ಸ್ಪೆಕ್ಟರ್ ವಿ.ವಿ. ಮನೋಜ್ ಮತ್ತು ಎಸ್.ಐ ಸಂತೋಷ್ ಕುಮಾರ್ ನೇತೃತ್ವದ ಪೊಲೀಸರು ನಿನ್ನೆ ದಾಳಿ ನಡೆಸಿ ಜೂಜಾಟದಲ್ಲಿ ನಿರತರಾದ ನಾಲ್ವರನ್ನು ಸೆರೆಹಿಡಿದಿದ್ದಾರೆ. ಕೋಳಿಯಡ್ಕದ ಕಬಿಲಾಲ್ (೩೮), ಕರ್ನಾಟಕ ಕೊಪ್ಪಳದ ಮಲ್ಲಿಕಾರ್ಜುನ (೨೫), ಮೈಸೂರಿನ ಕುಮಾರ್ ನಾಯ್ಕ (೩೮), ಗದಗ್ ನಿವಾಸಿ ಹಿರಣ್ (೩೫) ಎಂಬವರನ್ನು ಬಂಧಿಸಲಾಗಿದೆ. ಓರ್ವ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜುಗಾರಿ ಅಡ್ಡೆಯಿಂದ ೯೬೪೫ ರೂ. ವಶಪಡಿಸಲಾಗಿದೆ.

NO COMMENTS

LEAVE A REPLY