ಗಾಂಜಾ ಮಾರಾಟ ವಿರೋಧಿಸಿದ ದ್ವೇಷ: ಬೈಕ್ ಸವಾರನನ್ನು ತಡೆದು ನಿಲ್ಲಿಸಿ ಹಲ್ಲೆ

0
31

ಕುಂಬಳೆ: ಕಯ್ಯಾರು ನಿವಾಸಿ ಮುಹಮ್ಮದ್ ಹನೀಫ್ (೨೯)ರನ್ನು ಗಾಂಜಾ ತಂಡ ತಡೆದು ನಿಲ್ಲಿಸಿ ಮಾರಕಾಯುಧಗಳಿಂದ ಹಲ್ಲೆಗೈದಿರುವುದಾಗಿ ದೂರಲಾಗಿದೆ.

ಗಾಯಗೊಂಡ ಇವರನ್ನು ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಹನೀಫ್‌ರನ್ನು ಸ್ಕೂಟರ್ ಹಾಗೂ ಕಾರಿನಲ್ಲಿ ತಲುಪಿದ ಆರು ಮಂದಿಯ ತಂಡ ತಡೆದು ನಿಲ್ಲಿಸಿ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಗಾಂಜಾ ಮಾರಾಟವನ್ನು ವಿರೋಧಿಸಿದ ದ್ವೇಷವೇ ಹಲ್ಲೆಗೆ ಕಾರಣವೆಂದು ದೂರಲಾಗಿದೆ. ಇದರಂತೆ ಮುಹಮ್ಮದ್ ಹನೀಫ್‌ರ ದೂರಿನಂತೆ ಪಚ್ಚಂಬಳ ನಿವಾಸಿಗಳಾದ ಆಪು, ಮೂಸ, ಇರ್ಶಾದ್, ಸರ್ಫುದ್ದೀನ್, ಅಕ್ಕು, ಮುರ್ಶಾದ್ ಎಂಬಿವರ ವಿರುದ್ಧ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY