ಬಸ್ಸಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳಕ್ಕೆ ಯತ್ನ: ಹೊಸದುರ್ಗ ಸಬ್ ರಿಜಿಸ್ಟ್ರಾರ್ ಬಂಧನ

0
47

ಕಾಸರಗೋಡು: ಬಸ್ಸಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಹೊಸದುರ್ಗ ಸಬ್ ರಿಜಿಸ್ಟ್ರಾರ್‌ರನ್ನು ಕಾಡಾಂಬುಳ ಪೊಲೀಸರು ಬಂಧಿಸಿದ್ದಾರೆ.

ಹೊಸದುರ್ಗ ಸಬ್ ರಿಜಿಸ್ಟ್ರಾರ್ ಜೋಯ್(೫೧) ಕಾಡಾಂಪುಳ ಬಂಧಿತನಾದ ಆರೋಪಿ.

ತಿರುವನಂತಪುರದಿಂದ ಮಂ ಗಳೂರಿಗೆ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ  ಮಂಗಳೂರಿನ ವಿದ್ಯಾರ್ಥಿನಿಯೂ ಆಗಿರುವ ೨೩ರ ಹರೆಯದ ಯುವತಿಯೋರ್ವೆ ನೀಡಿದ ದೂರಿನಂತೆ ಕಾಡಾಂಬುಳ ಪೊಲೀಸರು ಜೋಯ್ ಕಾಡಾಂಬುಳ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಬಸ್ ಪ್ರಯಾಣದ ಮಧ್ಯೆ ಬಸ್ ಕಾಡಾಂಬುಳ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶಕ್ಕೆ ತಲುಪಿ  ದಾಗ ಅದೇ ಬಸ್ಸಿನಲ್ಲಿ ಹಿಂದಿನ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ  ಆರೋಪಿ ತನಗೆ ಲೈಂಗಿಕ ಕಿರುಕುಳ ನೀಡಲೆತ್ನಿಸಿರುವುದಾಗಿಯೂ,  ಆ ಬಗ್ಗ ಆಕೆ ಬಸ್ಸಿನ ನಿರ್ವಾಹಕರಲ್ಲಿ ಮೊದಲು ದೂರು ನೀಡಿದ್ದಳು. ಅದರಂತೆ ನಿರ್ವಾಹಕ ಆಕೆಯನ್ನು ಅಲ್ಲಿಂದ ಬೇರೆಸೀಟಿನಲ್ಲಿ ಕುಳಿತುಕೊಳ್ಳುವ ಸೌಕರ್ಯ ಏರ್ಪಡಿಸಿದ್ದಾರೆ. ಬಳಿಕ ಆಕೆ ತನ್ನ ಮೊಬೈಲ್ ಫೋನ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಾಳೆ.  ಅದರಂತೆ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.  ಬಂಧಿತ ಆರೋಪಿ ಕುಂಡರ ನಿವಾಸಿಯಾಗಿ ರುವುದಾಗಿ ತಿಳಿಯಲಾಗಿದೆ.

NO COMMENTS

LEAVE A REPLY