ಬೈಕ್-ಕಾರು ಢಿಕ್ಕಿ ಹೊಡೆದು ಯುವಕ ದಾರುಣ ಮೃತ್ಯು

0
37

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಕಲ್ಲಂಗೈಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ವಾಹನ ಅಪಘಾತದಲ್ಲಿ ಕೋಳಿ ಅಂಗಡಿ ನೌಕರನಾದ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ.

ಉಳಿಯತ್ತಡ್ಕ ಜೈಮಾತಾ ಶಾಲೆ ಬಳಿಯ ನಿವಾಸಿ ರಫೀಕ್ ಎಂಬವರ ಪುತ್ರ ಫಯಾಸ್ (೨೦) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಬೈಕ್ ಹಾಗೂ ಕಾರು ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಉಳಿಯತ್ತಡ್ಕದಲ್ಲಿರುವ ಕೋಳಿ ಅಂಗಡಿಯ ನೌಕರನಾದ ಫಯಾಸ್  ಇಂದು ಬೆಳಿಗ್ಗೆ ಅಂಗಡಿಯ ಮಾಲಕನ ಬೈಕ್‌ನಲ್ಲಿ ತೆರಳಿದ್ದರೆನ್ನ ಲಾಗಿದೆ. ಸುಮಾರು ೯ ಗಂಟೆ ವೇಳೆ ಇವರು ಮೊಗ್ರಾಲ್ ಭಾಗದಿಂದ ಕಾಸರಗೋಡು ಭಾಗಕ್ಕೆ ಬೈಕ್‌ನಲ್ಲಿ ಬರುತ್ತಿದ್ದಂತೆ ಎದುರಿನಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಗಂಭೀರ ಗಾಯಗೊಂಡ  ಫಯಾಸ್‌ನನ್ನು ನಾಗರಿಕರು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಲಾಗಿದೆ.

NO COMMENTS

LEAVE A REPLY