ಮಾವೋವಾದಿ ಪರ ಕಿರುಹೊತ್ತಗೆ ವಿತರಣೆ: ಇಬ್ಬರು ಸಿಪಿಎಂ ಕಾರ್ಯಕರ್ತರ ಸೆರೆ

0
37

ಕಲ್ಲಿಕೋಟೆ: ಪಾಲ್ಘಾಟ್ ಅಟ್ಟಪ್ಪಾಡಿ ಯಲ್ಲಿ ಅರಣ್ಯದಲ್ಲಿ ಪೊಲೀಸರು ಮತ್ತು ಮಾವೋವಾದಿ ಗಳ ಮಧ್ಯೆ ಎರಡು ದಿನಗಳಲ್ಲಾಗಿ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಮಾವೋವಾದಿ ಗಳು ಗುಂಡೇಟಿಗೆ ಬಲಿಯಾದ ಬೆನ್ನಲ್ಲೇ ಮಾವೋವಾದಿ ಪರ ಕಿರು ಹೊತ್ತಗೆಗಳನ್ನು ವಿತರಿಸುತ್ತಿದ್ದ ಕಲ್ಲಿಕೋಟೆ ನಿವಾಸಿಗಳಾದ ಇಬ್ಬರನ್ನು ಪತ್ತಿರಂಗಾವು ಪೊಲೀಸರು ಬಂಧಿಸಿದ್ದಾರೆ. ಅವರಿಂದ ಮಾವೋವಾ ದಿ ಪರ ಹಲವು ಕಿರು ಹೊತ್ತಗೆಗಳನ್ನೂ ಪೊಲೀಸರು ವಶಪಡಿಸಿದ್ದಾರೆ. ತಲಶ್ಶೇರಿ ಯಲ್ಲಿ ಕಾನೂನು ವಿದ್ಯಾರ್ಥಿಯೂ ತಿರುವನ್ನೂರು ನಿವಾಸಿ ಅಲನ್ ಶುಹೈಬ್ ಮತ್ತು ಪಾರನ್ನೂರು ನಿವಾಸಿ ತಾಹಾ ಫಸಲ್ ಬಂಧಿತರಾದ ಯುವಕರಾಗಿದ್ದಾರೆ. ರಾಷ್ಟ್ರವಿರೋಧಿ  ಚಟುವಟಿಕೆಗಳಲ್ಲಿ ತೊಡಗುವವರ ಮೇಲೆ ಹೊರಿಸಲಾಗುವ ಯು.ಎ.ಪಿ.ಎ ಕಾನೂನು ಪ್ರಕಾರವೂ ಇವರಿಬ್ಬರ ವಿರುದ್ಧ ಕೇಸು ದಾಖಲಿಸಲಾ ಗಿದೆ. ಬಂಧಿತರಾದ ಇಬ್ಬರು ಸಿಪಿಎಂ ಕಾರ್ಯಕರ್ತ ರಾಗಿದ್ದಾರೆಂದೂ ಪೊಲೀ ಸರು ತಿಳಿಸಿದ್ದಾರೆ. ಮಾತ್ರವಲ್ಲ, ಅವರ ನಿವಾಸಗಳಿಗೂ ಪೊಲೀಸರು ದಾಳಿ ಮತ್ತು ತಪಾಸಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಅಟ್ಟಪ್ಪಾಡಿಯಲ್ಲಿ ಮಾವೋವಾದಿ ದಾಳಿ ವಿರುದ್ಧ ಪೊಲೀಸರು ನಡೆಸಿದ ಕಾರ್ಯಾಚರಣೆಯನ್ನು ಸಮರ್ಥಿಸಿ ಮುಖ್ಯಮಂತ್ರಿ ಮುಂದಕ್ಕೆ ಸಾಗುತ್ತಿರುವಂತೆಯೇ, ಅವರದ್ದೇ ಪಕ್ಷಕ್ಕೆ ಸೇರಿದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿರುವುದು ಗಮನಾರ್ಹವಾಗಿದೆ. ಇದೇ ವೇಳೆ ಈ ಇಬ್ಬರು ಯುವಕರನ್ನು ಬಂಧಿಸಿದ ಪೊಲೀಸ್ ಕ್ರಮವನ್ನು ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಖಂಡಿಸಿ ದ್ದಾರೆ. ಅಟ್ಟಪ್ಪಾಡಿಯಲ್ಲಿ ಮಾವೋವಾ ದಿಗಳ ವಿರುದ್ಧ ಪೊಲೀಸರು ನಡೆಸಿದ ಕಾರ್ಯಾಚರಣೆಯನ್ನು ಬೆಂಬಲಿಸಿ ಅಟ್ಟಪ್ಪಾಡಿಯಲ್ಲಿ ಹಲವು ಪೋಸ್ಟರ್‌ಗಳೂ ಇನ್ನೊಂದೆಡೆ ಪ್ರತ್ಯಕ್ಷಗೊಂಡಿದೆ.

NO COMMENTS

LEAVE A REPLY