ಯುವಕ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

0
54

ಕಾಸರಗೋಡು: ಕಾಸರಗೋಡು ಜಿಲ್ಲೆಯ ನೀಲೇಶ್ವರದ ನಿವಾಸಿಯಾದ ಯುಕನೋರ್ವ ಮಲಪ್ಪುರಂ ಮಾಲಾಟ್ಟೂರಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನೀಲೇಶ್ವರ ಮದುರಂಗೈ ಚಾಳಕಳಿಯಿಲ್ ವೀಟಿಲ್ ನಾರಾಯಣನ್-ಕಾರಿಚ್ಚಿ ದಂಪತಿ ಪುತ್ರ ಬಿಜು(೩೬) ಸಾವನ್ನ್ಪಪಿದ ಯುವಕ.

ಮಾಲಾಟ್ಟೂರಿನ ಹೆಂಚು ನಿರ್ಮಾಣ ಕಾರ್ಖಾನೆಯೊಂದರ ಬಳಿಯ ಖಾಸಗಿ ಕಟ್ಟಡದ ಬಳಿ ಬಿಜು ನಿನ್ನೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದೇ ವೇಳೆ ಮೂರು ಅಂತಸ್ತಿನ ಈ ಕಟ್ಟಡದ ಮೇಲಿನಿಂದ ಬಿದ್ದು ಬಿಜು ಸಾವನ್ನಪ್ಪಿರುವುದಾಗಿ ಶಂಕಿಸಲಾ ಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಸಾವಿನಲ್ಲಿ ನಿಗೂಢತೆ ಇದು ಎಂದು ಊರವರು ಶಂಕಿಸಿದ್ದಾರೆ.  ಗಾರೆ ಕಾರ್ಮಿಕ ನಾಗಿರುವ ಬಿಜು ಮಾಲಾಟ್ಟೂರಿನ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸಿ ಅಲ್ಲಿಂದಲೇ ಕೆಲಸಕ್ಕೆ ಹೋಗುತ್ತಿದ್ದರ. ಮೃತರು ಸಹೋದರಿಯರಾದ ಬಿಂದು, ಬೀನಾ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY