ಕುಂಬಳೆ: ಸಮಾಜದ್ರೋಹಿಗಳಿಂದ ಶೌಚಾಲಯದ ಬಾಗಿಲು ನಾಶ

0
39

ಕುಂಬಳೆ: ಇಲ್ಲಿನ ಪೇಟೆ ಯಲ್ಲಿ ಸಮಾಜದ್ರೋಹಿಗಳ ಕಾಟ ಹೆಚ್ಚಾಗುತ್ತಿದೆ. ಪಂಚಾ ಯತ್ ಕಚೇರಿ ಬಳಿ ಇರುವ ಸಾರ್ವಜನಿಕ ಶೌಚಾಲಯದ ಬಾಗಿಲನ್ನು ಸಮಾಜಕಂಟಕರು ನಿನ್ನೆ ರಾತ್ರಿ ಹಾನಿಗೊಳಿಸಿದ್ದಾರೆ. ಪಂಚಾಯತ್‌ಗೆ ಬರುವ ಜನರ ಉಪಯೋಗಕ್ಕಾಗಿ ನಿರ್ಮಿಸಿದ ಈ ಶೌಚಾಲಯದ ಬಾಗಿಲನ್ನು ಕತ್ತಿ ಉಪಯೋಗಿಸಿ ನಾಶಪಡಿಸಿದ ಸ್ಥಿತಿಯಲ್ಲಿ ಕಂಡುಬಂದಿದೆ. ರಾತ್ರಿ ವೇಳೆ ಮದ್ಯಪಾನಗೈದು ಈ ಭಾಗದಲ್ಲಿ ಸಂಚರಿಸುವವರ ಕೃತ್ಯವಾಗಿರಬಹುದೆಂದು ಶಂಕಿಸಲಾಗಿದೆ.

NO COMMENTS

LEAVE A REPLY