ಶಬರಿಮಲೆ ಯುವತಿ ಪ್ರವೇಶ: ಮರು ಪರಿಶೀಲನಾ ಅರ್ಜಿ ಮೇಲಿನ ತೀರ್ಪು  ಜ್ಯಾರಿಗೊಳಿಸಲಾಗುವುದು- ಮುಖ್ಯಮಂತ್ರಿ

0
43

ತಿರುವನಂತಪುರ: ಶಬರಿಮಲೆಗೆ ಯುವತಿಯರ ಪ್ರವೇಶದ ವಿಷಯ ದಲ್ಲಿ ಸುಪ್ರಿಂಕೋರ್ಟ್ ನೀಡುವ ತೀರ್ಪು ಅದೇನೇ ಆಗಿದ್ದರೂ ಅದನ್ನು ಜ್ಯಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಧಾನಸಭೆಯಲ್ಲಿ ಇಂದು ಬೆಳಿಗ್ಗೆ ಸ್ಪಷ್ಟಪಡಿಸಿದ್ದಾರೆ.

ಶಬರಿಮಲೆಗೆ ಯುವತಿಯರ ಪ್ರವೇಶಕ್ಕೆ ಅವಕಾಶ ನೀಡಿ ೨೦೧೮ ಸೆಪ್ಟಂಬರ್ ೨೮ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದಾಗಲೂ ಅದನ್ನು ಜ್ಯಾರಿಗೊಳಿಸುವ ನಿಲುವು ಸರಕಾರ ತಾಳಿತ್ತು. ಅದನ್ನು ಪ್ರತಿಭಟಿಸಿ ಹಲವು ಹೋರಾಟಗಳೂ ನಡೆದಿತ್ತು. ಅದರಿಂದ ಸರಕಾರ ವಿಚಲಿತಗೊಳ್ಳದೆ ತನ್ನ ಅದೇ ನಿಲುವು ಮುಂದುವರಿಸಿತ್ತು. ಸುಪ್ರಿಂಕೋರ್ಟ್ ಅಂದು ನೀಡಿದ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ಒಟ್ಟು ೫೬ ಮರು ಪರಿಶೀಲನಾ ಅರ್ಜಿಗಳು ಬಳಿಕ ಸುಪ್ರಿಂಕೋರ್ಟ್‌ಗೆ ಸಲ್ಲಿಸಲ್ಪಟ್ಟಿವೆ. ಅವುಗಳ ವಿಚಾರಣೆ ನ್ಯಾಯಾಲಯ ದಲ್ಲಿ ಈಗಾಗಲೇ ಪೂರ್ಣಗೊಂಡಿದೆ. ಆ ಅರ್ಜಿಗಳ ಮೇಲಿನ ತೀರ್ಪು ಅದೇನೇ ಆಗಿದ್ದರೂ ಅದನ್ನು ಜ್ಯಾರಿಗೊಳಿಸಲಾಗುವುದೆಂದೂ, ಈ ವಿಷಯದಲ್ಲಿ ಸರಕಾರದ ನಿಲುವು ಒಂದೇ ಆಗಿದೆ. ಅದು ಬದಲಾ ಗದೆಂದೂ ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

ಶಬರಿಮಲೆಯಲ್ಲಿ ಆಚಾರ  ಸಂರಕ್ಷಿಸಲು ಕಾನೂನು ರೂಪು ನೀಡುವ ವಿಷಯ ಸರಕಾರದ ಪರಿಗಣನೆಯಲ್ಲಿಲ್ಲವೆಂದೂ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.

ಈ ವಿಷಯದಲ್ಲಿ ಕಾನೂನು ತಜ್ಞರ ಸಲಹೆಯನ್ನೂ ಸರಕಾರ ಕೇಳಿತ್ತು. ಅದರ ಆಧಾರದಲ್ಲಿ ಹೊಸ ಕಾನೂನಿಗೆ ರೂಪು ನೀಡದೇ ಇವರು ತೀರ್ಮಾನಕ್ಕೆ ಸರಕಾರಕ್ಕೆ ಬಂದಿದೆ ಎಂದು ತಿಳಿಸಿದ ಮುಖ್ಯಮಂತ್ರಿ, ಆಚಾರ ಸಂರಕ್ಷಣೆ ಹೆಸರಲ್ಲಿ ಬಿಜೆಪಿ ನಡೆಸುತ್ತಿರುವ ಹೋರಾಟ ಕೇವಲ ಒಂದು ಇಲೆಕ್ಷನ್ ಸ್ಟಂಟ್ ಮಾತ್ರವೇ ಆಗಿದೆ ಎಂದು   ಆರೋಪಿಸಿದ್ದಾರೆ.

ಶಬರಿಮಲೆಯ ಆಚಾರ ಸಂರಕ್ಷಣೆ ಕಾನೂನು ರೂಪು ನೀಡುವಂತಿಲ್ಲ ಎಂಬ ಮುಖ್ಯಮಂತ್ರಿಯವರ ಹೇಳಿಕೆಯನ್ನು ಅಲ್ಲಗಳೆದ ವಿಪಕ್ಷ ನೇತಾರ ರಮೇಶ್ ಚೆನ್ನಿತ್ತಲ, ಕಾನೂನು ನಿರ್ಮಾಣ ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

NO COMMENTS

LEAVE A REPLY