ದೇಲಂಪಾಡಿ ನಿವಾಸಿ ಯುವತಿಯನ್ನು ಮಡಿಕೇರಿಯಲ್ಲಿ ಇರಿದು ಕೊಲೆ: ಪತಿ ಬಂಧನ

0
55

ಅಡೂರು: ದೇಲಂಪಾಡಿ ಬಳಿಯ ನಿವಾಸಿಯೂ ಪ್ರಸ್ತುತ ಮಡಿಕೇರಿಯಲ್ಲಿ ವಾಸಿಸುತ್ತಿದ್ದ ಯುವತಿಯನ್ನು ಆಕೆಯ ಪತಿ ಇರಿದು ಬರ್ಭರವಾಗಿ ಕೊಲೆಗೈದ ಘಟನೆ ನಡೆದಿದೆ.

 ದೇಲಂಪಾಡಿ ಮೆಣಸಿನಕಾನ  ನಿವಾಸಿ ಜುಬೈದಾ (೨೫) ಎಂಬಾಕೆ ಕೊಲೆಗೈಯ್ಯಲ್ಪಟ್ಟ ಯುವತಿಯಾಗಿ ದ್ದಾಳೆ. ಈಕೆಯ ಪತಿ ಮಹಮ್ಮದ್ ಶರೀಫ್ (೨೭) ಎಂಬಾತ ಈಕೆಯ ನ್ನು ಕಡಿದು ಕೊಲೆಗೈದಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಮಡಿಕೇರಿ ನಿವಾಸಿಯಾದ ಮಹಮ್ಮದ್ ಶರೀಫ್ ಹಾಗೂ ಜುಬೈದಳ ವಿವಾಹ ಏಳು ವರ್ಷಗಳ ಹಿಂದೆ ನಡೆದಿದೆ. ಈ ದಂಪತಿಗೆ ೫ ಹಾಗೂ ೩ ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ.

ಕಳೆದೆರಡು ದಿನಗಳಿಂದ ಈ ಮಕ್ಕಳನ್ನು ಮಹಮ್ಮದ್ ಶರೀಫ್ ತನ್ನ ತಾಯಿ ಮನೆಯಲ್ಲಿ ನಿಲ್ಲಿಸಿದ್ದನೆನ್ನಲಾಗುತ್ತಿದೆ. ಮೊನ್ನೆ ರಾತ್ರಿ  ಮನೆಗೆ ತಲುಪಿದ ಈತ ಹಾಗೂ ಪತ್ನಿ ಜುಬೈದಾ ಮಧ್ಯೆ ಜಗಳ ನಡೆದಿತ್ತೆನ್ನಲಾಗಿದೆ. ಈ ವೇಳೆ  ಮಹಮ್ಮದ್ ಶರೀಫ್ ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ. ಗಂಭೀರ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಮೃತಪಟ್ಟಿದ್ದಾಳೆ.

ಮೃತದೇಹದಲ್ಲಿ  ೩೦ಕ್ಕೂ ಹೆಚ್ಚು ಇರಿತದ ಗಾಯಗಳಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY