ರೈಲು ಹಳಿಯಲ್ಲಿ ರುಂಡ ಬೇರ್ಪಟ್ಟ ಮೃತದೇಹ ಪತ್ತೆ

0
47

ಉಪ್ಪಳ: ರುಂಡ ವಿಚ್ಛೇಧಿ ಸಲ್ಪಟ್ಟ ರೀತಿಯಲ್ಲಿ ಅಪರಿಚಿತ ಮೃತದೇಹ ಉಪ್ಪಳ ಗೇಟ್ ಬಳಿಯ ರೈಲು ಹಳಿಯಲ್ಲಿ ನಿನ್ನೆ ರಾತ್ರಿ ಪತ್ತೆಯಾಗಿದೆ. ಸುಮಾರು ೩೫ರಿಂದ ೪೦ರ ಮಧ್ಯೆ ಪ್ರಾಯ ಅಂದಾಜಿಸಲಾಗಿದೆ. ತಲೆ ನಜ್ಜುಗುಜ್ಜಾದ ಸ್ಥಿತಿಯಲ್ಲಿರುವ ಕಾರಣ ಗುರುತು ಪತ್ತೆ ಅಸಾಧ್ಯ ವಾಗಿದೆ. ಮೃತದೇಹದ ಬಳಿ ಯಲ್ಲೇ ಬ್ಯಾಗ್ ಪತ್ತೆಯಾಗಿದ್ದು ಇದರಲ್ಲಿ ಬಟ್ಟೆಬರೆಗಳಿವೆ. ಆತ್ಮಹತ್ಯೆಯೋ, ರೈಲಿನಿಂದ ಬಿದ್ದು ಅಪಘಾತ ಸಂಭವಿಸಿರಬಹುದೇ ಎಂಬ ಶಂಕೆ ಮಂಜೇಶ್ವರ ಪೊಲೀಸರಲ್ಲಿದೆ. ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮಂಜೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

NO COMMENTS

LEAVE A REPLY