ತಂಬಾಕು ಉತ್ಪನ್ನ ಕೈವಶ ಇಬ್ಬರಿಗೆ ಜುಲ್ಮಾನೆ

0
31

ಕಾಸರಗೋಡು: ಕೇರಳದಲ್ಲಿ ನಿಷೇಧ ಹೇರಲಾದ ತಂಬಾಕು ಉತ್ಪನ್ನಗಳನ್ನು ಕೈವಶವಿರಿಸಿಕೊಂಡ ಎರಡು ಪ್ರಕರಣಗಳ ಆರೋಪಿಗಳಿಗೆ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲ ಯ(೧) ತಲಾ ೮೦೦೦ ರೂ.ನಂತೆ ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.

೨೦೧೯ ಜುಲೈ ೧೨ರಂದು ಮುಳ್ಳೇರಿಯ ನೆಲ್ಲಿಕುಂಜೆ ರಸ್ತೆ ಬಳಿ ಆದೂರು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ೬೫ ಪ್ಯಾಕೆಟ್ ತಂಬಾಕು ಉತ್ಪನ್ನ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ನೆಕ್ರಾಜೆ ಪುಂಡೂರು ಹೌಸ್‌ನ ಕೆ. ಮೊಹಮ್ಮದ್(೬೫) ಮತ್ತು ೨೦೧೯ ಜುಲೈ ೩ರಂದು ಮುಳಿಯಾರು ಅಮ್ಮಂಗೋಡಿನಿಂದ ಆದೂರು ಪೊಲೀಸರು ೧೩೦ ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು ಬಂಧಿತನಾದ ಅಮ್ಮಂಗೋಡಿನ ಅಬ್ದುಲ್ ರಶೀದ್ ಎ.ಎಸ್.(೫೬) ಎಂಬವರಿಗೆ ನ್ಯಾಯಾಲಯ ಈ ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.

NO COMMENTS

LEAVE A REPLY