ಅನುಚಿತ ವರ್ತನೆ: ಆರೋಪಿಗೆ ೧೦,೦೦೦ ರೂ. ಜುಲ್ಮಾನೆ

0
34

ಕಾಸರಗೋಡು: ಅನುಚಿತ ರೀತಿಯಲ್ಲಿ ವರ್ತಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (೧) ೧೦,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಚೆರ್ಕಳ ಬಾಲಡ್ಕದ ಅಬ್ದುಲ್ ರಜಾಕ್ ಪಿ.ಎ.(೩೦) ಎಂಬಾತನಿಗೆ ಈ ಜುಲ್ಮಾನೆ ವಿಧಿಸಲಾಗಿದೆ. ೨೦೧೯ ಜುಲೈ ೧೪ರಂದು ಕಾಸ ರಗೋಡು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಬಳಿ ಅನುಚಿತ ರೀತಿಯಲ್ಲಿ ವರ್ತಿಸಿದ ಆರೋಪ ದಂತೆ ಕಾಸರ ಗೋಡು ಪೊಲೀಸರು ಅಬ್ದುಲ್ ರಜಾ ಕ್‌ನನ್ನು ಬಂಧಿಸಿ ಕೇಸು ದಾಖಲಿಸಿ ಕೊಂಡಿ ದ್ದರು. ಆ ಪ್ರಕರಣದಲ್ಲಿ ಆತನಿಗೆ ನ್ಯಾಯಾಲಯ ಜುಲ್ಮಾನೆ ವಿಧಿಸಿದೆ.

NO COMMENTS

LEAVE A REPLY