ವಿದ್ಯಾರ್ಥಿಗೆ ಹಲ್ಲೆ: ಇನ್ನೋರ್ವ ವಿದ್ಯಾರ್ಥಿಯ ತಂದೆ ವಿರುದ್ಧ ಕೇಸು

0
41

ಉಪ್ಪಳ: ಶಾಲೆಯಲ್ಲಿ ವಿದ್ಯಾ ರ್ಥಿಗೆ ಹಲ್ಲೆಗೈದ ಘಟನೆಯಲ್ಲಿ ಓರ್ವನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಕುರುಡಪದವು ಮೂಡಾಯಿಗುಡ್ಡೆ ನಿವಾಸಿ ಅಬೂಬಕ್ಕರ್‌ರ ಪುತ್ರ ಕುರುಡ ಪದವು ಎಯುಪಿ ಶಾಲೆಯ ೬ನೇ ತರಗತಿ ವಿದ್ಯಾರ್ಥಿ ಮೊಹ ಮ್ಮದ್ ಸಿನಾನ್ (೧೨)ನ ದೂರಿನಂತೆ ಸಹಪಾಠಿ ಇರ್ಫಾನ್‌ನ ತಂದೆ ಖಾದರ್‌ನ ವಿರುದ್ಧ ಕೇಸು ದಾಖಲಿಸಲಾಗಿದೆ.

ಶಾಲೆಯಲ್ಲಿ ನಡೆದ ಸಣ್ಣ ಘಟನೆ ನೆಪದಲ್ಲಿ ಇರ್ಫಾನ್‌ನ ತಂದೆ ತನ್ನನ್ನು ಕಳೆದ ತಿಂಗಳ ೩೧ರಂದು ಮಧ್ಯಾಹ್ನ ತರಗತಿಯಿಂದ ಹೊರಗೆ ಕರೆದು ಕೊಂಡು ಹೋಗಿ ಹಲ್ಲೆ ನಡೆಸಿರುವುದಾ ಗಿ ದೂರಿನಲ್ಲಿ ಸಿನಾನ್ ತಿಳಿಸಿದ್ದಾನೆ.

NO COMMENTS

LEAVE A REPLY