ಬಸ್‌ನಲ್ಲಿ ಸಾಗಿಸುತ್ತಿದ್ದ ೨.೭ ಲೀಟರ್ ಮದ್ಯ ವಶ

0
43

ಮಂಜೇಶ್ವರ: ಮಂಜೇಶ್ವರ ತಪಾಸಣಾ ಕೇಂದ್ರದಲ್ಲಿ ಅಬಕಾರಿ ತಂಡ ಇಂದು ಬೆಳಿಗ್ಗೆ ನಡೆಸಿದ ಕಾರ್ಯಾಚರಣೆಯಲ್ಲಿ ಕೇರಳ ರಾಜ್ಯ ಸಾರಿಗೆ ಬಸ್ಸಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ೨.೭ ಲೀಟರ್ (೧೫ ಬಾಟಲಿ) ವಿದೇಶ ಮದ್ಯ ವಶಪಡಿಸಲಾಗಿದೆ. ಅಬಕಾರಿ ಇನ್‌ಸ್ಪೆಕ್ಟರ್ ಮನೋಜ್‌ರ ನೇತೃತ್ವದ ಅಬಕಾರಿ ತಂಡ ಈ ಕಾರ್ಯಾಚರಣೆ ನಡೆಸಿದೆ. ಆದರೆ ಈ ಮದ್ಯವನ್ನು ಸಾಗಿಸುತ್ತಿದ್ದ ವ್ಯಕ್ತಿ ಯಾರು ಎಂಬುವುದನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಅಬಕಾರಿ ತಂಡ ತಿಳಿಸಿದೆ.

NO COMMENTS

LEAVE A REPLY