ವಾಳಯಾರ್ ಬಾಲಕಿಯರಿಬ್ಬರ ನಿಗೂಢ ಸಾವು ಪ್ರಕರಣ: ತುರ್ತುಗೊತ್ತುವಳಿ ಮಂಡನೆಗೆ ಸ್ಪೀಕರ್‌ರಿಂದ ನಕಾರ, ವಿಪಕ್ಷಗಳಿಂದ ಸದ್ದುಗದ್ದಲ, ಸಭಾ ತ್ಯಾಗ

0
66

ತಿರುವನಂತಪುರ: ಪಾಲ್ಘಾಟ್ ಜಿಲ್ಲೆಯ ವಾಳಯಾರ್‌ನಲ್ಲಿ ದಲಿತ ಕುಟುಂಬಕ್ಕೆ ಸೇರಿದ ಸಹೋದರಿಯ ರಾದ ಇಬ್ಬರು ಬಾಲಕಿಯರು ಲೈಂಗಿಕ ಕಿರುಕುಳಕ್ಕೊಳಗಾಗಿ ಬಳಿಕ ನೇಣು ಬಿಗಿದು ಸಾವನ್ನಪ್ಪಿದ ವಿಷಯವನ್ನು ವಿಪಕ್ಷೀಯರು ವಿಧಾನಸಭೆಯಲ್ಲಿ ಇಂದು ಬೆಳಿಗ್ಗೆ ಮತ್ತೆ ಚರ್ಚೆ ನಡೆಸಬೇಕೆಂದು ಆಗ್ರಹಿಸಿ ತುರ್ತು ಗೊತ್ತುವಳಿ ಮಂಡಿಸಿದ್ದಾರೆ. ಆದರೆ ಇದು ವಿಧಾನಸಭೆಯ ವ್ಯಾಪ್ತಿಗೊಳ ಬರುವ ವಿಷಯವಲ್ಲ, ಅದರಿಂದಾಗಿ ಆ ಬಗ್ಗೆ ತುರ್ತು ಚರ್ಚೆ ನಡೆಸಬೇಕಾದ ಯಾವುದೇ ಅಗತ್ಯವೂ ಇಲ್ಲ. ಅಗತ್ಯವೆನಿಸಿದ್ದಲ್ಲಿ ಶೂನ್ಯವೇಳೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಸಬಹುದೆಂದು ವಿಧಾನಸಭಾ ಅಧ್ಯಕ್ಷ ಶ್ರೀರಾಮಕೃಷ್ಣ ತಿಳಿಸಿದರಲ್ಲದೆ , ತುರ್ತು ಗೊತ್ತುವಳಿ ಮಂಡನೆಗೆ ಅನುಮತಿ ನಿರಾಕರಿಸಿದರು. ಅದು ಸದನದಲ್ಲಿ ಭಾರೀ ಸದ್ದುಗದ್ದಲ ಸೃಷ್ಟಿಗೂ ದಾರಿ ಮಾಡಿಕೊಟ್ಟಿದೆ. ರೋಷಕ್ಕೊಳಗಾದ ವಿಪಕ್ಷೀಯರು ತಮ್ಮ ಆಸನದಿಂದ ಎದ್ದು ತಮ್ಮ ಬೇಡಿಕೆಗಳನ್ನೊಳಗೊಂಡ ಫಲಕಗಳನ್ನು ಹಿಡಿದು ಸಭಾಪತಿಯ ಆಸನ ಸುತ್ತವರಿದು ಅವರ ವಿರುದ್ಧ ಘೋಷಣೆ ಮೊಳಗಿಸಿದರು. ಸಭಾಪತಿ ಅದಕ್ಕೂ ಜಗ್ಗದಾಗ ಅವರ ನಿಲುವನ್ನು ಪ್ರತಿಭಟಿಸಿ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ನೇತೃತ್ವದ ವಿಪಕ್ಷೀಯರು  ಸಭಾತ್ಯಾಗ ನಡೆಸಿದರು.

ವಾಳಯಾರ್‌ನ ಬಾಲಕಿಯರಿಬ್ಬ ರು ನಿಗೂಢ ಸಾವು ಪ್ರಕರಣದ ಹೆಸರಲ್ಲಿ ಯುಡಿಎಫ್ ಮತ್ತು ಬಿಜೆಪಿ ರಾಜ್ಯ ವ್ಯಾಪಕವಾಗಿ ಪ್ರತಿಭಟನೆ ನಡೆಸುತ್ತಿದೆ.  ಮಾತ್ರವಲ್ಲ, ಈ ಪ್ರಕರಣದ ತನಿಖೆ ಯನ್ನು ಸಿಬಿಐಗೆ ಹಸ್ತಾಂತರಿಸಬೇಕೆಂಬ ಬೇಡಿಕೆ ವಿಪಕ್ಷಗಳು ಮತ್ತು ಸಾವನ್ನಪ್ಪಿದ ಬಾಲಕಿಯರ ಹೆತ್ತವರಿಂದಲೂ ಉಂಟಾಗಿದೆ.

NO COMMENTS

LEAVE A REPLY