ಸಂದರ್ಶನ ದಿನಾಂಕ ಮುಂದೂಡಿಕೆ

ಮಂಜೇಶ್ವರ: ಇಲ್ಲಿನ ಗೋವಿಂದಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ಕನ್ನಡ ವಿಷಯಕ್ಕೆ  ಅತಿಥಿ ಅಧ್ಯಾಪಕರನ್ನು ನೇಮಕಗೊಳಿಸಲು ಜೂನ್ 2ರಂದು ಬೆಳಿಗ್ಗೆ 11.30ಕ್ಕೆ ನಿಗದಿ ಪಡಿಸಿದ್ದ ಸಂದರ್ಶನವನ್ನು 3ರಂದು ಬೆಳಿಗ್ಗೆ 11 ಗಂಟೆಗೆ ಮುಂದೂಡಿರುವುದಾಗಿ ತಿಳಿಸಲಾಗಿದೆ. ಕಲ್ಲಿಕೋಟೆ ಕಾಲೇಜು ಶಿಕ್ಷಣ ಡೆಪ್ಯೂಟಿ ಡೈರೆಕ್ಟರ್ ಪ್ರಕಟಿಸಿದ ಪ್ಯಾನಲ್‌ನಲ್ಲಿ ಒಳಗೊಂಡವರು ಜನನ ದಿನಾಂಕ, ಶಿಕ್ಷಣ ಅರ್ಹತೆ, ಅನುಭವ ದೃಢೀಕರಿಸುವ ಪ್ರಮಾಣಪತ್ರಗಳು ಹಾಗೂ ಅವುಗಳ ಪ್ರತಿಗಳ ಸಹಿತ ಪ್ರಾಂಶುಪಾಲರ ಮುಂಭಾಗ ಸಂದರ್ಶನಕ್ಕೆ ಹಾಜರಾಗಬಹುದು.

You cannot copy contents of this page