ಏಳನೇ ತರಗತಿ ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ

0
75

ಕಾಸರಗೋಡು: ಏಳನೇ ತರಗತಿ ವಿದ್ಯಾರ್ಥಿನಿ ಬಚ್ಚಲು ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಬೇಡಗಂ ಕುಟ್ಟಿಪ್ಪಾರ ಮಣಿಕ್ಕಲ್‌ನ ಗೋಪಾಲನ್-ಶಾಲಿನಿ ದಂಪತಿ  ಪುತ್ರಿಯೂ, ಕುಂಡಂಗುಳಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿಯಾದ ಆದಿತ್ಯ (೧೨)   ಮೃತಪಟ್ಟ ಬಾಲಕಿಯಾಗಿದ್ದಾಳೆ. ಎಂದಿನಂತೆ ನಿನ್ನೆ ಬೆಳಿಗ್ಗೆ ಈಕೆ ಶಾಲೆಗೆ ತೆರಳಿದ್ದು, ಸಂಜೆ ಮನೆಗೆ ಮರಳಿಬಂz ಕೂಡಲೇ ಬಚ್ಚಲು ಕೊಠಡಿಗೆ ತೆರಳಿದ್ದಳು. ದೀರ್ಘ ಹೊತ್ತಾದರೂ ಮರಳಿ ಬಾರದ ಹಿನ್ನೆಲೆಯಲ್ಲಿ  ಮನೆಯವರು ಬಾಗಿಲು ಬಡಿದರೂ ತೆರೆಯಲಿಲ್ಲ. ಈ ಹಿನ್ನೆಲೆಯಲ್ಲಿ  ಬಲ ಪ್ರಯೋಗಿಸಿ ಬಾಗಿಲು ತೆರೆದು ನೋಡಿದಾಗ ಬಾಲಕಿ ನೇಣುಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾಳೆ. ಮನೆಯವರ ಬೊಬ್ಬೆ ಕೇಳಿ ತಲುಪಿದವರು  ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಅನಂತರ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಲಾಗಿದೆ.

ಇಂದು ಬೆಳಿಗ್ಗೆ ಇನ್‌ಸ್ಪೆಕ್ಟರ್ ಟಿ. ಉತ್ತಮ್ ದಾಸ್ ನೇತೃತ್ವದಲ್ಲಿ ಪಂಚನಾಮೆ ನಡೆಸಿದ ಬಳಿಕ ಮೃತದೇಹವನ್ನು ತಜ್ಞ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ  ಕೊಂಡೊಯ್ಯಲಾಗಿದೆ. ಬಾಲಕಿಯ ಸಾವಿನ ಬಗ್ಗೆ ಬೇಡಗಂ ಪೊಲೀಸರು ಕೇಸುದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮೃತ ಬಾಲಕಿ ತಂದೆ, ತಾಯಿ, ಸಹೋದರಿ ಆರಾಧ್ಯ ಹಾಗೂ ಅಪಾರ  ಬಂಧು-ಮಿತ್ರರನ್ನು ಅಗಲಿದ್ದಾಳೆ. ಬಾಲಕಿಯ ನಿಧನದ ಶೋಕಾರ್ಥ ಕುಂಡಂಗಳಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಇಂದು ರಜೆ ನೀಡಲಾಗಿದೆ.

NO COMMENTS

LEAVE A REPLY