ಶಬರಿಮಲೆಗೆ ಉಗ್ರರ ಬೆದರಿಕೆ: ಪೊಲೀಸರು, ತೀರ್ಥಾಟಕರು, ಭಿಕ್ಷುಕರ ವೇಷದಲ್ಲಿ ನುಸುಳುವ ಸಾಧ್ಯತೆ; ಜಾಗ್ರತಾ ನಿರ್ದೇಶ

0
51

ತಿರುವನಂತಪುರ: ಶಬರಿಮಲೆ ಸನ್ನಿಧಾನದಲ್ಲಿ ಉಗ್ರಗಾಮಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಕೇಂದ್ರ ಭದ್ರತಾ ಸಂಸ್ಥೆಗಳು ಮತ್ತು ಗುಪ್ತಚರ ವಿಭಾಗ ಮುನ್ನೆಚ್ಚರಿಕೆ ನೀಡಿವೆ. ಶಬರಿಮಲೆ ದಟ್ಟಾರಣ್ಯದ ಮಧ್ಯೆ ಇದ್ದು, ಅದರಿಂದಾಗಿ ಉಗ್ರರ ದಾಳಿಗೆ ಹೆಚ್ಚಿನ ಸಾಧ್ಯತೆ ಇದೆ. ಭಕ್ತರು, ಪೊಲೀಸರು, ಭಿಕ್ಷುಕರ ವೇಷದಲ್ಲೂ ಉಗ್ರರು ಶಬರಿಮಲೆಗೆ ನುಸುಳುವ ಸಾಧ್ಯತೆ ಇದೆ. ಅದರಿಂದಾಗಿ ಅತೀವ ಕಟ್ಟೆಚ್ಚರ ಪಾಲಿಸಬೇಕಾಗಿರುವುದು ಅನಿವಾರ್ಯವಾಗಿದೆ ಎಂದೂ ‘ರಾ’ ಸೇರಿದಂತೆ ಇತರ ಎಲ್ಲಾ ಗುಪ್ತಚರ ವಿಭಾಗಗಳು ಮುನ್ನೆಚ್ಚರಿಕೆ ನೀಡಿವೆ.

ಕೇರಳ ಸಮುದ್ರ ಕರಾವಳಿ ಮೂಲಕ ಮತೀಯ ಭಯೋತ್ಪಾ ದಕರು, ಮಾವೋವಾದಿಗಳು ನುಸುಳುವ ಸಾಧ್ಯತೆ ಇದೆ. ಮಾತ್ರವಲ್ಲ, ಇವರು ಸಮುದ್ರ ಮಾರ್ಗ ಮೂಲಕ ಮಾರಕಾಯುಧ ಮತ್ತು ಸ್ಫೋಟಕ ವಸ್ತುಗಳನ್ನು ಸಾಗಿಸುವ ಸಾಧ್ಯತೆ ಇದೆ. ಆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಪೊಲೀಸ್ ಅಧಿಕಾರಿಗಳು ಗರಿಷ್ಠ ಜಾಗ್ರತೆ ಪಾಲಿಸಬೇಕು. ನೆರೆ ರಾಜ್ಯಗಳಿಂದಲೂ ಮತೀಯ ಮೂಲಭೂತವಾದಿಗಳು ಉಗ್ರಗಾಮಿ ಗ್ರೂಪ್‌ಗಳ ಚಲನವಲನಗಳ ಮಾಹಿತಿ ಗಳನ್ನು ಕೇಂದ್ರ ಗುಪ್ತಚರ ವಿಭಾಗ ಕೇರಳಕ್ಕೆ ಹಸ್ತಾಂತರಿಸಲಿದೆ. ಅಂತಹವರನ್ನು ಗುರುತಿಸಲು ನೆರೆ ರಾಜ್ಯಗಳ ಅಧಿಕಾರಿಗಳ ಸಹಾಯವನ್ನು ಪಡೆಯಲಾಗುವುದು.

ಅಯೋಧ್ಯೆ ತೀರ್ಪು, ಸಂವಿಧಾನದ ೩೭೦ ವಿಧಿ ಪ್ರಕಾರ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸುವಿಕೆ, ಜೈಷ್-ಎ ಉಗ್ರರ ಹತ್ಯೆ, ಕೇರಳದಲ್ಲಿ ಇತ್ತೀಚೆಗೆ ಮಾವೋವಾದಿ ಚಟುವಟಿ ಕೆಗಳ ಹೆಚ್ಚಳ ಇತ್ಯಾದಿಗಳ ಹಿನ್ನೆಲೆ ಯಲ್ಲಿ ಗುಪ್ತಚರ ವಿಭಾಗ ಈ ಮುನ್ನೆ ಚ್ಚರಿಕೆ ನೀಡಿದೆ. ಮಾವೋವಾದಿಗಳ ಬೆದರಿಕೆಯೂ ಉಂಟಾಗುವ ಸಾಧ್ಯ ತೆ ಇದೆ ಎಂದೂ ತಿಳಿಸಲಾಗಿದೆ.

ಶಬರಿಮಲೆ ಮತ್ತು ಪರಿಸರ ಪ್ರದೇಶಗಳಲ್ಲೂ ವಾಯುಪಡೆ ಮತ್ತು ನೌಕಾಪಡೆಗಳು ಸಂಯುಕ್ತವಾಗಿ ಆಕಾಶ ವೀಕ್ಷಣೆ ನಡೆಸಬೇಕು. ಶಬರಿಮಲೆ ಸನ್ನಿಧಾನಕ್ಕೆ ತಲುಪುವ ಎಲ್ಲಾ ಟ್ರಕ್ ಇತ್ಯಾದಿ ವಾಹನಗಳು ಮತ್ತು ಅದರಲ್ಲಿರುವ ಎಲ್ಲಾ ಸರಕುಗಳನ್ನು ಬಿಗಿ ತಪಾಸಣೆಗೊ ಳಪಡಿಸಿದ ಬಳಿಕವಷ್ಟೇ ಒಳಪ್ರವೇಶಿ ಸಬೇಕು, ಡೋಲಿಗಳು ಬರುವ ತೀರ್ಥಾಟಕರು ಅದೆಷ್ಟು ಕ್ಷೀಣಿತರಾ ಗಿದ್ದರೂ ಅಥವಾ ರೋಗಬಾಧಿತರಾ ಗಿದ್ದರೂ ಅವರ ಗುರುತು ಚೀಟಿಗಳನ್ನು ಮತ್ತಿತರ ದಾಖಲುಪತ್ರಳನ್ನು ಪರಿಶೀಲಿಸಬೇ ಕು. ಕಾಕಿ ಪ್ಯಾಂಟ್ ಧರಿಸಿ ಬರುವವರನ್ನೂ ಕಠಿಣ ತಪಾಸಣೆಗೊಳಪಡಿಸಬೇಕು. ಮಾತ್ರವಲ್ಲ, ವಿದೇಶಿಗಳು ಮತ್ತು ಅವರ ಜತೆ ಸಹಾಯಕರಾಗಿ ಬರುವವರನ್ನು ಬಿಗಿ ತಪಾಸಣೆಗೊಳಪಡಿಸಿ, ಅವರ ಕುರಿತಾದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿಡಬೇಕೆಂದೂ ಗುಪ್ತಚರ ವಿಭಾಗ ನೀಡಿದ ಮುನ್ನೆಚ್ಚರಿಕೆಯಲ್ಲಿ ತಿಳಿಸಲಾಗಿದೆ. ಶಬರಿಮಲೆ ತೀರ್ಥಾಟನಾ ಋತು ನವೆಂಬರ್ ೧೫ರಂದು ಆರಂಭಗೊಳ್ಳಲಿದೆ. ಅಂದು ಸಂಜೆ ಶಬರಿಮಲೆಯ ಗರ್ಭ ಗುಡಿ ಬಾಗಿಲನ್ನು ಭಕ್ತರ ದರ್ಶನಕ್ಕಾಗಿ ತೆರೆದುಕೊಡಲಾಗುವುದು. ಮಕರ ಸಂಕ್ರಮಣ ಉತ್ಸವದ ಬಳಿಕ ಜನವರಿ ೨೦ರಂದು ದೇಗುಲದ ಬಾಗಿಲು ಮುಚ್ಚಲಾಗುವುದು. ಶಬರಿಮಲೆಗೆ ನಾಲ್ಕು ಹಂತಗಳಲ್ಲಾಗಿ ಭದ್ರತೆ ಏರ್ಪಡಿಸಲಾಗುವುದು. ಅದರ ಪೂರ್ಣ ಹೊಣೆಗಾರಿಕೆಯನ್ನು ಎ.ಡಿ.ಜಿ. ಪಿ .ಶೇಕ್ ದರ್ವೇಶ್ ಸಾಹೀಬ್‌ರಿಗೆ ವಹಿಸಿಕೊಡಲಾಗಿದೆ.

NO COMMENTS

LEAVE A REPLY