ನಗರದಲ್ಲಿನ್ನು ಹಸಿದು ಬಳಲಬೇಕಾಗಿಲ್ಲ; ಪೊಲೀಸರ ಫುಡ್‌ಚಿಲ್ ನಾಳೆ ಉದ್ಘಾಟನೆ

0
60

ಕಾಸರಗೋಡು: ಕೈಯಲ್ಲಿ ಹಣವಿಲ್ಲ ಎಂಬುದರಿಂದ ಇನ್ನು ನಗರದಲ್ಲಿ ಯಾರೂ ಹಸಿವಿನಿಂದ ಒದ್ದಾಡದಿರಲು ಪೊಲೀಸರಿಂದ ಫುಡ್‌ಚಿಲ್ ಸಿದ್ಧವಾಯಿತು. ಹಸಿವಿನಿಂದ ಬಳಲುವ ಯಾರಿಗೂ ನಗರದ ಪೊಲೀಸ್ ಠಾಣೆಯ ಮುಂಭಾಗ ಆರಂಭಿಸಿದ ಫುಡ್ ಚಿಲ್‌ನಿಂದ ಆಹಾರ ತೆಗೆದು ಉಣ್ಣ ಬಹುದು. ಆದರೆ ದುರುಪಯೋಗ ಮಾತ್ರ ಮಾಡಬಾರದು.

ಕಾಸರಗೋಡು ಟೌನ್ ಪೊಲೀಸರ ನೇತೃತ್ವದಲ್ಲಿ ಒಂದು ಹೊತ್ತಿನ ತುತ್ತಿಗೂ ಗತಿ ಇಲ್ಲದವರಿಗೆ ಆಹಾರ ನೀಡುವ ಅಕ್ಷಯ ಪಾತ್ರೆ ಯೋಜನೆಗೆ ನಾಂದಿ ಹಾಡಲಾಗಿದೆ.  ಮುಖ್ಯವಾಗಿ ಮಧ್ಯಾಹ್ನದೂಟ ಇಲ್ಲಿ ಸಿದ್ಧಪಡಿಸಲಾಗಿದೆ. ಕಲ್ಲಿಕೋಟೆ, ಕಣ್ಣೂರು, ವಡಗರ ಮೊದಲಾದೆಡೆಗಳಲ್ಲಿ ಅಕ್ಷಯಪಾತ್ರೆ ಯೋಜನೆ ಆವಿಷ್ಕರಿಸಿದ ಡಿವೈಎಸ್ಪಿ ಪಿ.ಪಿ.ಸದಾನಂದನ್ ನಗರದಲ್ಲೂ ಇದಕ್ಕೆ ನೇತೃತ್ವ ನೀಡಿದ್ದಾರೆ. ಹೋಟೆಲ್ ವ್ಯಾಪಾರಿಗಳ, ಸಾಮಾಜಿಕ ಕಾರ್ಯಕರ್ತರ ನೇತೃತ್ವದಲ್ಲಿ ಯೋಜನೆ ಜ್ಯಾರಿಗೊಳಿಸಲಾಗುತ್ತಿದೆ. ಇದಕ್ಕಾಗಿ ಪೊಲೀಸರ ಒಕ್ಕೂಟ ವಾಟ್ಸಪ್ ಗ್ರೂಪ್ ರೂಪೀಕರಿಸಲಾಗಿದೆ. ಆರಂಭದಲ್ಲಿ ೫೦ ಮಂದಿಗೆ ಇಲ್ಲಿ ಆಹಾರ ಸಿದ್ಧಪಡಿಸಲಾಗುತ್ತಿದೆ. ಇಲ್ಲಿ ಸಿಸಿ ಟಿ.ವಿಯನ್ನು ಸ್ಥಾಪಿಸಲಾಗಿದೆ. ಇದರ ಉದ್ಘಾಟನೆ ನಾಳೆ ಸಂಜೆ ೪ಕ್ಕೆ  ಐ.ಜಿ. ಕೆ. ಸೇತುರಾಮನ್ ನಿರ್ವಹಿಸುವರು.

NO COMMENTS

LEAVE A REPLY