ಯುವಕನಿಗೆ ಇರಿದು ಗಾಯ: ಓರ್ವನ ವಿರುದ್ಧ ಕೇಸು

0
35

ಮಂಜೇಶ್ವರ: ಕಾರು- ಬೈಕ್‌ಗೆ ಢಿಕ್ಕಿ ಹೊಡೆದ ಬಗ್ಗೆ ಉಂಟಾದ ವಾಗ್ವಾದದಲ್ಲಿ ಕಾರು ಚಾಲಕನಿಗೆ ಬೈಕ್ ಸವಾರ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆಗೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಓರ್ವನ ವಿರುದ್ಧ ಕೊಲೆಗೆತ್ನ ಕೇಸು ದಾಖಲಿಸಿದ್ದಾರೆ. ವಾಮಂಜೂರು ನಿವಾಸಿ ಅಬ್ದುಲ್ಲರ ಪುತ್ರ ಯಾಕೂಬ್ (೩೩) ನೀಡಿದ ದೂರಿನಂತೆ ಮೊಗ್ರಾಲ್ ಕಡಪ್ಪುರ ನಿವಾಸಿ ನಿಶಾಮುದ್ದೀನ್ ಎಂಬಾತನ ವಿರುದ್ಧ ಕೇಸು ದಾಖಲಿಸಿದ್ದಾರೆ.  ಸೋಮವಾರ ರಾತ್ರಿ ೯ ಗಂಟೆಗೆ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರ ರಸ್ತೆಯ ಜಂಕ್ಷನ್‌ನಲ್ಲಿ ಕಾರು ಬೈಕ್‌ಗೆ ಢಿಕ್ಕಿ ಹೊಡೆದು ವಾಗ್ವಾದ ಉಂಟಾದಾಗ ಬೈಕ್ ಸವಾರ ಕಾರಿನ ಸೀಟಿನಲ್ಲಿ ಕುಳಿತಿದ್ದ ನನಗೆ ಚೂರಿಯಿಂದ ಇರಿದು, ಕಾರಿನಿಂದ ಹೊರಕ್ಕೆ ಎಳೆದು ಮತ್ತೆ ಇರಿಯಲು ಮುಂದಾಗಿದ್ದು, ಈ ವೇಳೆ ತಡೆದಾಗ ಭುಜಕ್ಕೆ ಗಾಯಗೊಂಡಿರುವುದಾಗಿ ಯಾಕೂಬ್ ದೂರಿದ್ದಾರೆ. ಗಾಯಾಳು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

NO COMMENTS

LEAVE A REPLY