ಪೆರಿಯದಲ್ಲಿ ಏರ್‌ಸ್ಟ್ರಿಪ್‌ಗೆ ಕೇಂದ್ರ ಸರಕಾರ ಅನುಮತಿ

0
27

ಕಾಸರಗೋಡು: ಏರ್‌ಸ್ಟ್ರಿಪ್ (ಕಿರು ವಿಮಾನ ನಿಲ್ದಾಣ)ಕ್ಕೆ ಕೇಂದ್ರ ಸರಕಾರ ಅನುಮತಿ ನೀಡಿದೆ. ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್ ಈ ವಿಷಯ ತಿಳಿಸಿದ್ದಾರೆ. ಇಲ್ಲಿಂದ ಉಡನ್ ಫೋರ್ ಎಂಬ ಕಿರು ವಿಮಾನ ಸೇವೆ ಆರಂಭಗೊಳ್ಳಲಿದೆ.

ಪೆರಿಯ ರಾಷ್ಟ್ರೀಯ ಹೆದ್ದಾರಿಯಿಂ ದ ಆರು ಕಿ.ಮೀ ದೂರದಲ್ಲಿರುವ ಕನಿಕುಂಡ್ ಎಂಬಲ್ಲಿ ಕಿರು ವಿಮಾನ ನಿಲ್ದಾಣ ಸ್ಥಾಪಿಸಲಾಗು ವುದು. ಇದಕ್ಕೆ ಅಗತ್ಯದ ಭೂಮಿ ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ರಾಜ್ಯ ಸರಕಾರವೇ ನೀಡಬೇಕಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ಕಿರು ವಿಮಾನ ನಿಲ್ದಾಣಕ್ಕೆ ಅಗತ್ಯದ ೮೦ ಎಕ್ರೆ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದೆ. ಅದನ್ನು ಕೇಂದ್ರಕ್ಕೆ ಸಲ್ಲಿಸಿದ ಬಳಿಕ ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕೆಲಸ ಶೀಘ್ರ ಆರಂಭಗೊಳ್ಳಲಿದೆ. ಇದು ಒಟ್ಟು ೬೦ ಕೋಟಿ ರೂ.ವೆಚ್ಚ ನಿರೀಕ್ಷಿಸುವ ಯೋಜನೆಯಾಗಿದೆ. ಇದರಲ್ಲಿ ಶೇ. ೫೧ರಷ್ಟು ಪಾಲನ್ನು ಕೇರಳ ಸರಕಾರ ಮತ್ತು ಶೇ. ೪೯ರಷ್ಟು ಷೇರನ್ನು ಖಾಸಗಿ ವಲಯ ಹೊಂದಲಿದೆ. ಭವಿಷ್ಯದಲ್ಲಿ ಇದನ್ನು ಒಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಪರಿವರ್ತಿಸುವ ರೀತಿಯ ಪೂರ್ವಭಾವಿ ಸಿದ್ಧತೆಯೊಂದಿಗೆ ಯೋಜನೆಗೆ ರೂಪು ನೀಡಲಾಗಿದೆ. ೨೦೦೬ರಲ್ಲಿ ವಿ.ಎಸ್.ಅಚ್ಯುತಾನಂದನ್ ನೇತೃತ್ವದ ಸರಕಾರ ಈ ಯೋಜನೆಗೆ ಆರಂಭಿಕ ಚಾಲನೆ ನೀಡಿತ್ತು.

NO COMMENTS

LEAVE A REPLY