ಮದ್ಯ ಸೇವಿಸಿ ಬೈಕ್ ಚಲಾಯಿಸಿದ ಇಬ್ಬರ ಸವಾರರ ಸೆರೆ

0
23

ಮಂಜೇಶ್ವರ: ಮದ್ಯ ಸೇವಿಸಿ ಬೈಕ್  ಚಲಾಯಿಸಿದ ಆರೋ ಪದಲ್ಲಿ ಇಬ್ಬರು ಸವಾರರನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದು, ಬೈಕ್‌ನ್ನು ವಶಪಡಿಸಿದ್ದಾರೆ. ನಿನ್ನೆ ರಾತ್ರಿ ೮.೪೦ರ ವೇಳೆ ಮಂಜೇಶ್ವರ ಭಾಗದಿಂದ ಆಗಮಿಸುತ್ತಿದ್ದಾಗ ಹೊಸಂಗಡಿಯಿಂ ದ ಬೈಕ್ ಸವಾರ ಹೊಸಂಗಡಿ ರೈಲ್ವೇಗೇಟ್ ಬಳಿಯ ನಿವಾಸಿ ಬಾಲ ಚಂದ್ರ(೪೨) ಹಾಗೂ ಇನ್ನೊಂದು ಪ್ರಕರಣದಲ್ಲಿ ಪೊಸೋಟು ಪೆಟ್ರೋಲ್ ಪಂಪ್ ಪರಿಸರದಿಂದ ಕುಂಬಳೆ ನಿವಾಸಿ ಲಿಯೋ ಡಿ’ಸೋಜಾ(೩೮)ನನ್ನು ಸೆರೆ ಹಿಡಿದಿ ದ್ದಾರೆ. ಮಂಗಳೂರು ಭಾಗದಿಂದ ಕುಂಬಳೆ ಕಡೆಗೆ ಸಂಚರಿಸುವ ವೇಳೆ ಸೆರೆ ಹಿಡಿದಿದ್ದಾರೆ. ಎಸ್.ಐ. ಅನೂಪ್ ಕುಮಾರ್ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸಿದ್ದಾರೆ.

NO COMMENTS

LEAVE A REPLY