ಪೌರತ್ವ ತಿದ್ದುಪಡಿ ಮಸೂದೆಗೆ  ರಾಷ್ಟ್ರಪತಿ ಅಂಕಿತ

0
26

ನವದೆಹಲಿ: ಲೋಕಸಭೆ ಮತ್ತು ರಾಜ್ಯ ಸಭೆ ಅಂಗೀಕರಿಸಿದ ಪೌರತ್ವ ತಿದ್ದುಪಡಿ ಮಸೂದೆ -೨೦೧೯ಕ್ಕೆ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್‌ರ ಅಂಕಿತ ಬಿದ್ದಿದ್ದು, ಆ ಮೂಲಕ ಅದು ಕಾನೂನು ಆಗಿ ಜಾರಿಗೆ ಬಂದಿದೆ.

ಅಧಿಕೃತ ಗಜೆಟ್‌ನಲ್ಲಿ ಇದನ್ನು ಪ್ರಕಟಿ ಸುವ ಮೂಲಕ ಈ ಮಸೂದೆ ಗುರುವಾರ ದಿಂದಲೇ ಕಾಯ್ದೆಯಾಗಿ ಪರಿವರ್ತನೆಯಾ ಗಿದೆಯೆಂದು ಅಧಿಕೃತ ಪ್ರಕಟಣೆ ತಿಳಿಸಿದೆ.

 ಇದೀಗ ಪೌರತ್ವ ತಿದ್ದುಪಡಿ ಕಾಯ್ದೆ ಅನ್ವಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪಘಾನಿಸ್ತಾನದಲ್ಲಿ ಧಾರ್ಮಿಕ ಕಿರುಕುಳಕ್ಕೊಳಗಾಗಿ ೨೦೧೪ ದಶಂಬರ ೩೧ಕ್ಕೆ ಮೊದಲು ಭಾರತಕ್ಕೆ ವಲಸೆ ಬಂದ ಹಿಂದೂ, ಸಿಕ್ಖ್, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯದವರನ್ನು ಇನ್ನು ಅಕ್ರಮ ವಲಸಿಗರು ಎಂದು ಪರಿ ಗಣಿಸಲಾಗುವುದಿಲ್ಲ, ಅವರಿಗೆ  ಭಾರತೀಯ ಪೌರತ್ವ ನೀಡಲಾಗುತ್ತದೆ.

ಈ ತಿದ್ದುಪಡಿ ಮಸೂದೆ ವಿರುದ್ಧ ಈಶಾನ್ಯ ರಾಜ್ಯಗಳಲ್ಲಿ ವ್ಯಾಪಕವಾಗಿ ತಲೆಯೆತ್ತಿದ್ದ ಜನಾಕ್ರೋಶ ಮತ್ತು ಅದರಿಂದ ಉಂಟಾದ ಹಿಂಸಾಚಾರ ಈಗ ಕ್ರಮೇಣ ನಿಯಂತ್ರಣಕ್ಕೆ ಬರತೊಡಗಿದೆ. ಅದರಿಂದಾಗಿ ಹಿಂಸಾಚಾರ ಭುಗಿಲೆದ್ದ ಅಸ್ಸಾಂನ ಕೆಲವು ಜಿಲ್ಲೆಗಳಿಗೆ ಹೇರಲಾಗಿದ್ದ ಕರ್ಫ್ಯೂವನ್ನು ಇಂದಿನಿಂದ ಸಡಿಲಗೊಳಿಸಲಾಗಿದೆ. ಅಸ್ಸಾಂನ ಗುವಾಹಟಿಯಲ್ಲಿ ಉದ್ರಿಕ್ತರು ಬೀದಿಗಿಳಿದು ಕಲ್ಲು ತೂರಾಟ ನಡೆಸಿದ್ದು, ಅದನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಮೂವರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಈಗ ಸ್ಥಿತಿ ಕ್ರಮೇಣ ಶಮನಗೊಳ್ಳತೊಡಗಿದೆಯಲ್ಲದೆ ಸೇನೆ ನಿಯಂತ್ರಣ ಏರ್ಪಡಿಸಲಾಗಿದೆ.

NO COMMENTS

LEAVE A REPLY