ವಿಸಾ ವಂಚನೆ ಪ್ರಕರಣ: ಒಂದೇ ಕುಟುಂಬದ ಮೂವರ ಸೆರೆ

0
21

ಕಾಸರಗೋಡು: ಬ್ರಿಟನ್‌ನಲ್ಲಿ ಉದ್ಯೋಗ ವಿಸಾ ನೀಡುವ ಭರವಸೆ ನೀಡಿ ಮುಂಗಡ ಹಣ ಪಡೆದು ಬಳಿಕ ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿ ಒಂದೇ ಕುಟುಂಬದ ಮೂವರನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ನಿವಾಸಿಗಳಾದ ವೀಣಾ ರೋಡ್ರಿಗಸ್(೩೨), ಆಕೆಯ ಸಹೋದರ ಫ್ರಾನ್ಸಿಸ್ ಎಡ್ವಿನ್ ರೋಡ್ರಿಗಸ್(೨೨) ಮತ್ತು ತಂದೆ ಡೆನ್ನೀಸ್(೬೬) ಬಂಧಿತರಾದ ಆರೋಪಿಗಳಾಗಿದ್ದಾರೆ. ಇವರನ್ನು ಮೈಸೂರಿನಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರ ಪೈಕಿ ವೀಣಾಳ ಪತಿ ಜೋನ್ ಬೆನ್ಹರ್ ಡಿ’ಸೋಜಾ(೪೦) ಈ ಪ್ರಕರಣದ ಒಂದನೇ ಆರೋಪಿಯಾಗಿದ್ದು, ಆತನ ಬಂಧನ ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.  ೨೦೧೮ರಲ್ಲಿ ಬೇಕಲ ನಿವಾಸಿ ತರುಣ್ ಎಂಬವರು ನೀಡಿದ ದೂರಿನಂತೆ ಈ ನಾಲ್ಕು ಮಂದಿ ವಿರುದ್ಧ ಬೇಕಲ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಗಳು ೨೦೧೭ರಲ್ಲಿ ಬೇಕಲದಲ್ಲಿ ವಾಸಿಸುತ್ತಿದ್ದರು. ಆ ವೇಳೆ ದೂರುಗಾರ ತರುಣ್‌ನನ್ನು ಪರಿಚಯಗೊಂಡು ಬ್ರಿಟನ್‌ನ ಹಡಗು ಸಂಸ್ಥೆಯಲ್ಲಿ ಉದ್ಯೋಗ ದೊರಕಿಸಿ ಕೊಡುವುದಾಗಿ ನಂಬಿಸಿ ಹಲವು ಬಾರಿ ತರುಣ್‌ನಿಂದ ಎಂಟು ಲಕ್ಷ ರೂ. ಮುಂಗಡವಾಗಿ ಕೇಳಿ ಪಡೆದರೆಂದೂ ಬಳಿಕ ಹಣವನ್ನಾಗಲಿ, ವಿಸಾವನ್ನಾಗಲಿ ಹಿಂತಿರುಗಿಸದೆ ವಂಚಿಸಿದ್ದರೆಂದು ಪೊಲೀಸರಿಗೆ ತರುಣ್  ನೀಡಿದ ದೂರಿನಲ್ಲಿ ಆರೋಪಿಸಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಇತರ ಹಲವೆಡೆಗಳಲ್ಲಿ ಇದೇ ರೀತಿಯ ವಂಚನೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY