ರಸ್ತೆ ಬಿರುಕು ಬಿಟ್ಟು ಕಂದಕ ಸೃಷ್ಟಿ: ನಾಗರಿಕರು ಭೀತಿಯಲ್ಲಿ

0
29

ಹೊಸದುರ್ಗ: ರಸ್ತೆ ಮಧ್ಯದಲ್ಲೇ ಬಿರುಕುಬಿಟ್ಟು ಕಂದಕ ಸೃಷ್ಟಿಯಾಗಿದ್ದು, ನಾಗರಿಕರಲ್ಲಿ ಇದು ಭೀತಿಗೆ ಕಾರಣವಾಗಿದೆ. ಘಟನೆ ಹಿನ್ನೆಲೆಯಲ್ಲಿ ಈ ರಸ್ತೆ ಮೂಲಕದ ವಾಹನ ಸಂಚಾರ ಪೂರ್ಣವಾಗಿ ಸ್ಥಗಿತಗೊಂಡಿದೆ.

ಒಡಯಂಚಾಲ್ ನಾಯ್ಕಯಂ ರಸ್ತೆಯಲ್ಲಿ ಕುನ್ನುವಯಲ್ ಪಾರಕಲ್ಲ್ ಎಂಬಲ್ಲಿ ರಸ್ತೆ ಮಧ್ಯೆ ಬಿರುಕು ಬಿಟ್ಟು ಕಂದಕ ಸೃಷ್ಟಿಯಾಗಿದೆ. ನಿನ್ನೆ ರಾತ್ರಿ ೯ ಗಂಟೆಗೆ ಈ ಘಟನೆ ಸಂಭವಿಸಿದೆ.

ರಸ್ತೆ ದಿಢೀರನೆ ಬಿರುಕುಬಿಟ್ಟು ನೂರು ಮೀಟರ್‌ನಷ್ಟು ಆಳಕ್ಕೆ  ಕಂದಕ ಸೃಷ್ಟಿಯಾಗಿದೆ. ಇದು ಒಂದೂವರೆ ವರ್ಷ ಹಿಂದೆ ಡಾಮರೀಕರಣ ನಡೆಸಿದ ರಸ್ತೆಯಾಗಿದೆ. ಕೋಡೋಂ-ಬೇಳೂರು ಗ್ರಾಮ ಪಂಚಾಯತ್‌ನ ಅಧೀನತೆ ಯಲ್ಲಿ ಈ ರಸ್ತೆಯಿದೆ. ರಸ್ತೆ ಬಿರುಕುಬಿಟ್ಟು ಕಂದಕ ಸೃಷ್ಟಿಯಾಗಿರುವು ದನ್ನು ತಿಳಿದ ನಾಗರಿಕರು ಸ್ಥಳಕ್ಕೆ ತಲುಪಿ ದ್ದಾರೆ. ರಸ್ತೆ ಬಿರುಕುಬಿಡುವ ಸಂದರ್ಭದಲ್ಲಿ ವಾಹನಗಳೋ, ಪಾದಚಾರಿಗಳೋ ಇಲ್ಲದಿರುವುದರಿಂದ ಭಾರೀ ದುರಂತ ತಪ್ಪಿಹೋಗಿದೆ. ರಸ್ತೆ ಬಿರುಕುಬಿಟ್ಟ ಘಟನೆ ನಾಗರಿಕರಲ್ಲಿ ಭೀತಿ ಸೃಷ್ಟಿಸಿದೆ. ಇದೇ ರೀತಿಯಲ್ಲಿ ರಸ್ತೆಯ ಇತರ ಭಾಗಗಳೂ ಬಿರುಕುಬಿಡುವುದೇ ಎಂಬ ಆತಂಕ ನಾಗರಿಕರಲ್ಲಿ ಕಾಡತೊಡಗಿದೆ.

NO COMMENTS

LEAVE A REPLY