ರಾಜ್ಯದ ಆರ್ಥಿಕ ಬಿಕ್ಕಟ್ಟು ಇನ್ನಷ್ಟು ತೀವ್ರ

0
26

ತಿರುವನಂತಪುರ: ರಾಜ್ಯ ಅತೀ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದು,  ಕನಿಷ್ಠ ಅಂಚೆ ಚೀಟಿ ಖರೀದಿಸಲೂ ಹಣವಿಲ್ಲದ ಸ್ಥಿತಿಗೆ ತಲುಪಿದೆ.

ಇನ್ನೊಂದೆಡೆ ಆರ್ಥಿಕ ಬಿಕ್ಕಟ್ಟಿನಿಂದ ಹೊರ ಬರಲು ಸರಕಾರ ನಿರಂತರವಾಗಿ ಒಂದರಹಿಂದೆ ಒಂದರಂತೆ ಸಾಲ ಪಡೆಯುತ್ತಿದ್ದು ಅದು ಸರಕಾರವನ್ನು ಸಾಲದ ಕುಣಿಕೆಯಲ್ಲಿ ಸಿಲುಕುವಂತೆಯೂ ಮಾಡಿದೆ. ಕನಿಷ್ಠ ಅಂಚೆ ಚೀಟಿ ಖರೀದಿ ಸಲು ಸರಕಾರದ ಬಳಿ ಹಣವಿಲ್ಲದ  ರೀತಿ ಅತೀ ಗಂಭೀರ ಸ್ಥಿತಿ ನಿರ್ಮಾಣವಾಗಿದೆ. ಅಂಚೆ ಚೀಟಿಗಳಿಲ್ಲದೆ ರಾಜ್ಯ ವಿವಿಧ ಇಲಾಖೆಗಳ ಅಂಚೆ ವ್ಯವಹಾರಗಳು ನೆನೆಗುದಿಗೆ ಬೀಳತೊಡಗಿದೆ. ಮಾತ್ರವಲ್ಲ ಅದು ಇಲಾಖೆಗಳ ಎಲ್ಲಾ ಕಾರ್ಯ ನಿರ್ವಹಣೆಗಳನ್ನು ವಿಳಂಬಗೊಳಿಸ ತೊಡಗಿದೆ. ರಾಜ್ಯ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದೆ ಎಂಬುವುದನ್ನು ರಾಜ್ಯ ಹಣಕಾಸು ಸಚಿವ ಡಾ. ಥೋಮಸ್ ಐಸಾಕ್ ಕೂಡಾ ಒಪ್ಪಿಕೊಂಡಿದ್ದಾರೆ. ಅದಕ್ಕೆ ಅವರು ಕೇಂದ್ರ ಸರಕಾರವನ್ನೂ ದೂರಿದ್ದಾರೆ. ಸರಕು ಸೇವಾ ತೆರಿಗೆ (ಜಿಎಸ್‌ಟಿ) ವತಿಯಿಂದ ರಾಜ್ಯಕ್ಕೆ ಲಭಿಸಬೇಕಾಗಿದ್ದ ಅಗತ್ಯದ ಪಾಲು ಇನ್ನೂ ಮಂಜೂರು ಮಾಡಲಾಗಿಲ್ಲ.

ಸಾಲ ಪಡೆಯುವ ಮಿತಿಗೂ ಕೇಂದ್ರ ಸರಕಾರ ಕಡಿತಹೇರಿದೆ. ಇದೆಲ್ಲವೂ ರಾಜ್ಯ ಈಗ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿಗೆ ಪ್ರಧಾನ ಕಾರಣವಾಗಿದೆಯೆಂದು ಸಚಿವರು ಆರೋಪಿಸಿದ್ದಾರೆ. ಸರಕಾರ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದರೂ ಅದು ಅಭಿ ವೃದ್ಧಿ ಯೋಜನೆಗಳ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದೆಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ರಾಜ್ಯ ಎದುರಿಸುತ್ತಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಯುಡಿಎಫ್ ನಿನ್ನೆ  ಶ್ವೇತಪತ್ರವನ್ನು ಹೊರಡಿಸಿತ್ತು.

NO COMMENTS

LEAVE A REPLY